ಮಲಬಾರ್ ಗೋಲ್ಡ್‌ನಲ್ಲಿ ‘ಆರ್ಟಿಸ್ಟ್ರಿ’ ಪ್ರದರ್ಶನ -ಮಾರಾಟ ಉದ್ಘಾಟನೆ

Update: 2020-01-25 16:42 GMT

ಉಡುಪಿ, ಜ. 25: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಫೆ.2ರವರೆಗೆ ಹಮ್ಮಿಕೊಳ್ಳಲಾಗಿರುವ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಉಡುಪಿಯ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಉಡುಪಿ ಶೋರೂಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗ್ಯಲಕ್ಷ್ಮಿ ಕಿರಣ್ ಶೆಟ್ಟಿ ವಜ್ರಾಭರಣವನ್ನು, ಸ್ಮಿತಾ ಶಂಕರ್ ಪೂಜಾರಿ ಡಿವೈನ್ ಚಿನ್ನಾಭರಣವನ್ನು, ಅಪೂರ್ವ ಆದಿತ್ಯ ಬನ್ನಾಡಿ ಎರ-ಆನ್ಕಟ್ ಉದ್ಘಾಟಿಸಿದರು.

ಈ ಸಬ್ ಬ್ರಾಂಡ್ ಚಿನ್ನಾಭರಣಗಳನ್ನು ಧರಿಸಿದ ಉಡುಪಿಯ ರೂಪದರ್ಶಿ ಗಳಾದ ಕೃತಿ ನಾಯಕ್, ಸ್ಫೂರ್ತಿ ಶೆಟ್ಟಿ, ಸಂಧ್ಯಾ ನಾಯಕ್, ಸಹನ ಉಡುಪಿ, ಅನುಪ್ರಿಯ ಪೈ, ರೀತಿಕಾ ಭಕ್ತ, ಪ್ರಜ್ಞಾ ಕೊಡವೂರು ರಾಂಪ್ ವಾಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ಅವರ ಸಬ್ಬ್ರಾಂಡ್ ಗಳಾದ ಮೈನ್ ವಜ್ರಾಭರಣಗಳು, ಎರಾ-ಅನ್ಕಟ್ ವಜ್ರಾಭರಣಗಳು, ಡಿವೈನ್- ಭಾರತೀಯ ಪಾರಂಪರಿಕ ಆಭರಣಗಳು, ಎತಿನಿಕ್ಸ್-ಕರಕುಶಲ ವಿನ್ಯಾಸಿತ ಚಿನ್ನಾಭರಣ, ಪ್ರಶಿಯಾ- ಅಮೂಲ್ಯ ರತ್ನಾಭರಣಗಳು, ಸ್ಟಾರ್ಲೆಟ್ -ಮಕ್ಕಳ ಚಿನ್ನಾಭರಣಗಳು ಮತ್ತು ಹಾಯ್- ಕ್ಯಾಷುವಲ್ ಚಿನ್ನಾಭರಣಗಳ ಆಯ್ದ ಸಂಗ್ರಹಗಳಿವೆ.

ಮನಮೋಹಕವಾದ ಚಿನ್ನಾಭರಣಗಳನ್ನು ವಿಶೇಷ ಕೊಡುಗೆಯಾಗಿ 125 ರೂ. ಕಡಿತ ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‌ನಲ್ಲಿ ಮತ್ತು ಶೇ.10ವರೆಗೆ ಕಡಿತ ವಜ್ರದ ಮೌಲ್ಯದಲ್ಲಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರಹ್ಮಾನ್, ವ್ಯವಸ್ಥಾಪಕ ರಾಘವೇಂದ್ರ ನಾಯಕ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News