ಜ.26ರಿಂದ ಮೂಳೂರ್ ಉಮಿಯತ್ತಡ್ಕ ಮಖಾಂ ಉರೂಸ್

Update: 2020-01-25 16:59 GMT

ಬಂಟ್ವಾಳ, ಜ.25: ಇತಿಹಾಸ ಪ್ರಸಿದ್ಧ ಮೂಳೂರ್ ಉಮಿಯತ್ತಡ್ಕ ಮಖಾಂ ಉರೂಸಿ ಜ.26ರಿಂದ ಏಳು ದಿನಗಳ ಕಾಲ ಖಾಝಿ ಶೈಖುನಾ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್  ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬಂಟ್ವಾಳ ತಾಲೂಕಿನ ಮೂಳೂರ್ ಉಮಿಯತ್ತಡ್ಕ ಎಂಬಲ್ಲಿನ  ವಲಿಯುಲ್ಲಾಹಿ (ಖಸಿ) ರವರ ಹೆಸರಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಉರೂಸ್  ನಡೆಸಿಕೊಂಡು ಬರಲಾಗುತ್ತಿದೆ.

ಜ.26ರಿಂದ ಏಳು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೇರಳ, ಕರ್ನಾಟಕದ ಉಲಮಾ, ಸೂಫೀವರ್ಯರು, ಸಾದಾತುಗಳೂ ಭಾಗವಹಿಸಲಿದ್ದಾರೆ. ಫೆ. 2 ರಂದು ಹಗಲು ಉರೂಸ್ ಮತ್ತು ಅನ್ನದಾನ ನಡೆಯಲಿದೆ ಎಂದು ಜುಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಉರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News