ಜೆಇಇ ಮೈನ್ಸ್: ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Update: 2020-01-25 17:15 GMT

ಮಂಗಳೂರು: ಜೆಇಇ ಮೈನ್ಸ್-ಜನವರಿ 2020ರ ಪ್ರಥಮ ಹಂತದ ಬಿ ಅರ್ಕ್ ಮತ್ತು ಬಿ ಪ್ಲಾನಿಂಗ್ ಪ್ರವೇಶ ಪರೀಕ್ಷೆಯಲ್ಲಿ ವಿಕಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಮುಂದಿನ ಪರೀಕ್ಷೆಗೆ ಅರ್ಹತೆಗಳಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಒಟ್ಟು 16 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಕೇದಾರ್ ನಾಯಕ್ ಪಿ(99.70), ಸಂಜೀವಿನಿ ಎಸ್ (99.31), ತೇಜಲ್ ಕಾಮತ್(98.74), ಕುಮಾರೇಶ್ ಹಿರೇಮಠ್ (96.20), ಕಾರ್ತಿಕ್ ನಾಗರಾಜ್ ನಾಯ್ಕ್(87.41),  ಆಶ್ರೀತಾ ಎಂ(83.72) ಮತ್ತು ಸುಮಂತ್ ಪಾಟೀಲ್ (81.99) ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News