ಸಂತ ಸಮಾಜಕ್ಕೆ ಸಂದ ಪ್ರಶಸ್ತಿ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Update: 2020-01-25 23:49 IST
ಉಡುಪಿ, ಜ.25: ನಮ್ಮ ಗುರುಗಳಿಗೆ ಇಂದು ದೊರಕಿದ ಪದ್ಮ ವಿಭೂಷಣ ಪ್ರಶಸ್ತಿ ಸಕಲ ಸಂತ ಸಮಾಜಕ್ಕೆ ಸಂದ ಪ್ರಶಸ್ತಿ ಎಂಬುದಾಗಿ ನಾವು ಭಾವಿಸುತ್ತೇವೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಕೇಂದ್ರ ಸರಕಾರ ಇಂದು ಮರಣೋತ್ತರವಾಗಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿರುವುದಕ್ಕೆ ಅತ್ಯಂತ ಸಂತಸ ಸೂಚಿಸುತ್ತಾ ಅವರು ಈ ಪ್ರತಿಕ್ರಿಯೆ ನೀಡಿದರು.
ಗುರುಗಳಿಗೆ ಸಂದಿರುವ ಈ ಪ್ರಶಸ್ತಿಯಿಂದ ಸಂತ ಸಮಾಜದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದವರು ಅಭಿಪ್ರಾಯಪಟ್ಟರು.