ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಗಣರಾಜ್ಯೋತ್ಸವ

Update: 2020-01-26 13:59 GMT

ಮಂಗಳೂರು, ಜ.26:ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ಇದರ ವತಿಯಿಂದ ಕಂಕನಾಡಿ ಕಚೇರಿಯ ಮುಂಭಾಗದಲ್ಲಿ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಕುದ್ರೋಳಿ ಹಯಾತುಲ್ ಇಸ್ಲಾಂ ನಡುಪಳ್ಳಿ ಮದ್ರಸದ ಅಧ್ಯಾಪಕ ನೌಷಾದ್ ಅನ್ಸಾರಿ, ವಿಶ್ವಾಸ್ ಕ್ರೌನ್ ಅಪಾರ್ಟ್ ಮೆಂಟ್ ಮಾಲಕರ ಸಮಿತಿಯ ಪ್ರದಾನ ಕಾರ್ಯದರ್ಶಿ ಲಾಯ್ ಫ್ರಾಂಕ್ ಮತ್ತು ಪತ್ರಕರ್ತ ಪುಷ್ಪರಾಜ್ .ಬಿ. ಎನ್ ಜೊತೆಯಾಗಿ ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವದ ಸಂದೇಶ ನೀಡಿದ ನೌಷಾದ್ ಅನ್ಸಾರಿ ಮಾತನಾಡುತ್ತಾ, ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಿರುವ ಹಕ್ಕುಗಳ ಸಂರಕ್ಷಣೆಯಾಗಬೇಕಾಗಿದೆ. ಭಾರತ ದೇಶದಲ್ಲಿರುವ ಎಲ್ಲಾ ಪ್ರಜೆಗಳನ್ನು ಜಾತಿ, ಧರ್ಮ, ಮತ ಎಂದು ವಿಂಗಡಿಸದೆ ಸಮಾನವಾಗಿ ಕಾಣಬೇಕೆಂದು ಸಂವಿಧಾನದ ಮೂಲಕ ನಮಗೆ ನೀಡಿರುವ ಸಮಾನತೆಯ ಹಕ್ಕು ಸೇರಿದಂತೆ ಎಲ್ಲಾ ಮೂಲಭೂತ ಹಕ್ಕಿನ ರಕ್ಷಣೆಯಾಗಬೇಕೆಂದು ನೌಷಾದ್ ಅನ್ಸಾರಿ ತಿಳಿಸಿದ್ದಾರೆ.

ದೇಶದ ಎಲ್ಲಾ ಜನಸಮುದಾಯ ಶಾಂತಿಯಿಂದ ನೆಮ್ಮದಿಯಿಂದ ಪರಸ್ಪರ ಒಗ್ಗಟ್ಟಿನಿಂದ ಬದುಕುಬೇಕಾಗಿದೆ ಎನ್ನುವ ಸಂದೇಶ ಎಲ್ಲರನ್ನೂ ತಲುಪಬೇಕಾಗಿದೆ ಎಂದು ಲಾಯ್ ಫ್ರಾಂಕ್ ಸಂದೇಶ ನೀಡಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ನಮ್ಮ ಸುತ್ತಮುತ್ತ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದರೊಂದಿಗೆ ನಮ್ಮ ಕರ್ತವ್ಯವನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಪುಷ್ಪರಾಜ್ ಬಿ.ಎನ್ ಹೇಳಿದರು.

ಸಮಾರಂಭದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸಲಹೆಗಾರ ಸುಲೈಮಾನ್ ಶೇಕ್ ಉಪಸ್ಥಿತರಿದ್ದರು. ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ನ ಅಧ್ಯಕ್ಷ ರಿಯಾಝ್ ಅಹಮ್ಮದ್ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಹಮೀದ್ ಕಣ್ಣೂರು ವಂದಿಸಿದರು. ಇದೇ ಸಂದರ್ಭದಲ್ಲಿ ಸ್ವಉದ್ಯೋಗ ನಡೆಸಲು ಆಸಿಫ್ ಎಂಬವರಿಗೆ ಸಂಸ್ಥೆಯ ವತಿಯಿಂದ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News