ಬಗ್ದಾದ್: ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ ರಾಕೆಟ್ ಗಳು

Update: 2020-01-26 18:12 GMT

ಬಗ್ದಾದ್,ಜ.26: ರವಿವಾರ ಇಲ್ಲಿಯ ಅಮೆರಿಕ ರಾಯಭಾರಿ ಕಚೇರಿಯ ಬಳಿ ಹಲವಾರು ರಾಕೆಟ್‌ಗಳು ಅಪ್ಪಳಿಸಿವೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಟಿಗ್ರಿಸ್‌ನ ಪಶ್ಚಿಮ ದಂಡೆಯಿಂದ ಭಾರೀ ಶಬ್ದಗಳನ್ನು ಸುದ್ದಿಗಾರರು ಕೇಳಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ದೇಶಗಳ ರಾಯಭಾರಿ ಕಚೇರಿಗಳಿವೆ.

ಮೂರು ಕತ್ಯೂಷಾ ರಾಕೆಟ್‌ಗಳು ಭಾರೀ ಬಿಗು ಭದ್ರತೆಯ ಈ ಪ್ರದೇಶವನ್ನು ಅಪ್ಪಳಿಸಿದೆ ಎಂದು ಭದ್ರತಾ ಮೂಲವೊಂದು ತಿಳಿಸಿದ್ದರೆ, ಐದು ರಾಕೆಟ್‌ಗಳು ಈ ಪ್ರದೇಶದಲ್ಲಿ ಬಿದ್ದಿವೆ ಇನ್ನೊಂದು ಭದ್ರತಾ ಮೂಲವು ಹೇಳಿದೆ. ರಾಕೆಟ್ ದಾಳಿಗಳಲ್ಲಿ ಸಾವುನೋವು ಸಂಭವಿಸಿದೆಯೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News