ಒಮರ್ ಚಿತ್ರ ತೀವ್ರ ಕಳವಳವನ್ನುಂಟು ಮಾಡಿದೆ:ಡಿಎಂಕೆ ವರಿಷ್ಠ ಸ್ಟಾಲಿನ್

Update: 2020-01-27 13:55 GMT

ಹೊಸದಿಲ್ಲಿ,ಜ.27: ಬಂಧನದಲ್ಲಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಳಿಯ ಗಡ್ಡ ಬಿಟ್ಟಿರುವ ಚಿತ್ರವನ್ನು ನೋಡಿ ತೀವ್ರ ಕಳವಳವಾಗಿದೆ ಎಂದು ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಹೇಳಿದ್ದಾರೆ.

ಯಾವುದೇ ವಿಚಾರಣೆಯಿಲ್ಲದೆ ಬಂಧನದಲ್ಲಿರುವ ಜಮ್ಮು-ಕಾಶ್ಮೀರದ ಇತರ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಹಾಗೂ ಇತರ ಕಾಶ್ಮೀರಿ ನಾಯಕರ ಬಗ್ಗೆಯೂ ತನಗೆ ತೀವ್ರ ಕಳವಳವಿದೆ. ಕೇಂದ್ರ ಸರಕಾರವು ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಕಾಶ್ಮೀರ ಕಣಿವೆಯಲ್ಲಿ ಸಹಜ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂದು ಸ್ಟಾಲಿನ್ ಟ್ವೀಟಿಸಿದ್ದಾರೆ.

ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಜ.25ರಂದು ಉಮರ್ ಚಿತ್ರದ ಬಗ್ಗೆ ಆಘಾತ ಮತ್ತು ನೋವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News