ಕಿರಿಮಂಜೇಶ್ವರ: ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ

Update: 2020-01-27 14:59 GMT

ಉಡುಪಿ ಜ.27: ಉಡುಪಿ ಅಂಚೆ ಇಲಾಖೆ ವತಿಯಿಂದ ಕಿರಿಮಂಜೇಶ್ವರ ಗ್ರಾಪಂನ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದು ಪಡಿ ಶಿಬಿರವನ್ನು ಕಿರಿಮಂಜೇಶ್ವರ ಶ್ರೀಕೃಷ್ಣಲಲಿತಾ ಸಭಾಂಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ, ಈ ಭಾಗದ ಜನರಿಗೆ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಯ ಅವಶ್ಯಕತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಈ ಶಿಬಿರ ಏರ್ಪಡಿಸಿ ರುುದು ಅತ್ಯಂತ ಶ್ಲಾಘನೀಯ ಎಂದರು.

ಗ್ರಾಪಂ ಅಧ್ಯಕ್ಷೆ ಲಲಿತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಅಂಚೆ ಕಚೇರಿಯ ಉಮಾನಾಥ ಮಾತನಾಡಿದರು. ಸುಧಾಕರ ಜಿ.ದೇವಾಡಿಗ ಮಾರ್ಗದರ್ಶನ ನೀಡಿದರು. ಶಿಬಿರದ ಮುಂದಾಳತ್ವ ವಹಿಸಿದ್ದ ಕಿರಿಮಂಜೇಶ್ವರ ಶಾಖಾ ಅಂಚೆ ಪಾಲಕಿ ಜ್ಯೋತಿ, ಕಂಬದಕೋಣೆ ಉಪ ಅಂಚೆ ಪಾಲಕ ಅರುಣ್ ಕುಮಾರ್ ಶಾನಬಾಗ್, ಗ್ರಾಪಂ ಉಪಾಧ್ಯಕ್ಷ ಶೇಖರ್ ಖಾರ್ವಿ, ಕುಂದಾಪುರ ಸಹಾಯಕ ಅಂಚೆ ಅಧೀಕ್ಷ ಗಣಪತಿ ಮರಡಿ ಉಪಸ್ಥಿತರಿದ್ದರು. 1463 ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News