ಮಾಹೆಯಲ್ಲಿ ಗಣರಾಜ್ಯೋತ್ಸವ ಆಚರಣೆ
Update: 2020-01-27 20:33 IST
ಮಣಿಪಾಲ, ಜ.27: ದೇಶದ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ಯಲ್ಲಿ ರವಿವಾರ ಆಚರಿಸಲಾಯಿತು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಧ್ವಜಾರೋಹಣ ನೆರವೇರಿಸಿದರೆ, ಕುಲಪತಿ ಡಾ.ಎಚ್.ವಿನೋದ್ ಭಟ್ ಗಣರಾಜ್ಯೋತ್ಸವ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಸಂತಿ ಆರ್. ಪೈ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಡಾ.ಪಿಎಲ್‌ಎನ್‌ಜಿ ರಾವ್, ಡಾ.ಪೂರ್ಣಿಮಾ ಬಾಳಿಗಾ, ಡಾ. ನಾರಾಯಣ ಸಭಾಹಿತ್, ಮಾಹೆಯ ಆಡಳಿತಕ್ಕೊಳಪಟ್ಟ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಮಿ ಮ್ಯಾಥ್ಯೂಸ್ ಸ್ವಾಗತಿಸಿದರೆ, ಜೊಯ್ಸಿ ಕೆ.ಜೆ.ವಂದಿಸಿದರು.