ಬ್ರಹ್ಮಾವರ: ಉಚಿತ ಪಾಸ್ಟ್ ಪುಡ್ ತಯಾರಿಕೆ ತರಬೇತಿ

Update: 2020-01-27 15:08 GMT

ಬ್ರಹ್ಮಾವರ, ಜ.27: ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳ ಸಹ ಯೋಗದೊಂದಿಗೆ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ ಯೊಂದಿಗೆ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ-ಯವತಿಯರಿಗೆ ಫೆ.10ರಿಂದ ಫೆ.19ರವರೆಗೆ ಉಚಿತ ಪಾಸ್ಟ್ ಪುಡ್ ತಯಾರಿಕೆ ತರಬೇತಿಯನ್ನು ಆಯೋಜಿಸಲಾಗಿದೆ.

 ತರಬೇತಿ ಪಡೆಯಲು ಬಯಸುವವರು 18ರಿಂದ45 ವರ್ಷದೊಳಗಿದ್ದು, ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ತಕ್ಷಣ ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-575213, ಉಡುಪಿ ಜಿಲ್ಲೆ(ದೂ.ಸಂಖ್ಯೆ: 0820-2563455, 9449862808) ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

 ತರಬೇತಿಯ ಜೊತೆಯಲ್ಲಿ ಬ್ಯಾಂಕಿನ ವ್ಯವಹಾರ, ಸಾಲ ಸೌಲಭ್ಯಗಳ ಬಗ್ಗೆ, ಯೋಜನಾ ವರದಿ ತಯಾರಿಸುವ ಬಗ್ಗೆ ಸರಕಾರದ ಯೋಜನೆಗಳ ಸಹಾಯಧನದ ಬಗ್ಗೆ, ವ್ಯಕ್ತಿತ್ವ ವಿಕಾಸದ ಬಗ್ಗೆ ಮಾಹಿತಿಯನ್ನು ನೀಡಲಾಗು ವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News