ಸ್ಪೂರ್ತಿಧಾಯಕ ಚಲನಚಿತ್ರ ಇಂದಿನ ಅಗತ್ಯ: ಉದಯ್ ಕುಮಾರ್

Update: 2020-01-27 15:21 GMT

ಮಂಗಳೂರು, ಜ.27: ಹಿಂದಿನ ಕಾಲದ ಸಿನಿಮಾಗಳು ವ್ಯಕ್ತಿಯ ಜೀವನ ಬದಲಾವಣೆಯನ್ನು ಮಾಡುವಂತಹ ಸ್ಫೂರ್ತಿ ದಾಯಕವಾಗಿತ್ತು. ಆದರೆ ಇಂದಿನ ಕಾಲದಲ್ಲಿ ಅಂತಹ ಸಿನಿಮಾಗಳು ಬರುವುದು ಅತೀ ಕಡಿಮೆವಾಗಿದೆ ಎಂದು ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡಮಿ, ವಿವಿ ಕಾಲೇಜು, ಪ್ರತಿಕೋದ್ಯಮ ವಿಭಾಗ, ಎನ್ನೆಸ್ಸೆಸ್ಸ್ ಸಹಯೋಗದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಸೋಮವಾರ ವಿವಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಉಚಿತ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಜೀವನದ ಆದರ್ಶಗಳು, ಸಾಧನೆಗಳು ಮತ್ತು ಹೋರಾಟಗಳು ಶಾಶ್ವತ. ಅವರ ಸಾಧನೆಯ ಬಗ್ಗೆ ರಿಚರ್ಡ್ ಅಟೆನ್ ಬರೊ ನಿರ್ದೇಶನದಲ್ಲಿ ಗಾಂಧಿ ಮತ್ತು ಡಾ. ಜಬ್ಬಾರ್ ಪಟೇಲ್ ನಿರ್ದೇಶನದಲ್ಲಿ ಬಿ. ಆರ್. ಅಂಬೇಡ್ಕರ್ ಎರಡು ಚಿತ್ರಗಳು ನಿರ್ದೇಶಿಸಿದ್ದಾರೆ. ಈಗಿನ ಸಿನಿಮಾ ಕೇವಲ ಮನೋರಂಜನೆಯ ಉದ್ದೇಶದಿಂದ ಮಾತ್ರವೇ ಬರುತ್ತಿವೆ, ಅದರೆ ಇವರಿಬ್ಬರು ನಿರ್ದೇಶಿಸಿರುವ ಸಿನಿಮಾಗಳು ಮಹಾನ್ ವ್ಯಕ್ತಿಗಳ ಜೀವನದ ಆದರ್ಶವನ್ನು ತಿಳಿಸುವ ಉದ್ದೇಶದಿಂದ ಪ್ರದರ್ಶನಗೊಳ್ಳುತ್ತಿದೆ. ವಿದ್ಯಾರ್ಥಿಗಳು ಕೇವಲ ಚಿತ್ರ ವೀಕ್ಷಣೆ ಮಾಡದೆ ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಡಾ.ಉದಯ ಕುಮಾರ್ ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿದರು. ಪ್ರಾಧ್ಯಾಪಕಿ ಸೌಮ್ಯ, ಎನ್ನೆಸ್ಸೆಸ್ ಯೋಜನಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News