ನಿಡಂಬೂರು ಬಲ್ಲಾಳ, ನಿಡಂಬೂರುಶ್ರೀ ಪ್ರಶಸ್ತಿ ಪ್ರದಾನ

Update: 2020-01-27 16:14 GMT

ಉಡುಪಿ, ಜ.27: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಕಲಾ ಮಂಡಳಿಯ ವತಿಯಿಂದ ನೀಡಲಾಗುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ ಹಾಗೂ ನಿಡಂಬೂರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಅಂಬಲಪಾಡಿ ದೇವಳದ ವಠಾರದಲ್ಲಿ ನಡೆಯಿತು.

 ಯಕ್ಷಗಾನ ಸಂಘಟನೆಗೆ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ ಯನ್ನು ಕಾಜಾರಗುತ್ತು ಶ್ರೀದಶಾವತಾರ ಯಕ್ಷಗಾನ ಮಂಡಳಿಗೆ ಹತ್ತು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರದೊಂದಿಗೆ ನೀಡಿ ಗೌರವಿಸಲಾಯಿತು. ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಿದರು. ಮಂಡಳಿಯ ಅಧ್ಯಕ್ಷ ಅಚು್ಯತ ನಾಯಕ್ ಪ್ರಶಸ್ತಿ ಸ್ವೀಕರಿಸಿದರು.

ನಿಡಂಬೂರುಶ್ರೀ ಪ್ರಥಮ ಪ್ರಶಸ್ತಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಸಿಂಡಿಕೇಟ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೀವವಿಮಾ ಅಧಿಕಾರಿ ಎಸ್.ಕೆ.ಆನಂದ್ ಮತ್ತು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದರು. ಡಾ.ಶ್ರುತಿ ಬಲ್ಲಾಳ್ ಮತ್ತು ಡಾ.ನರೇಂದ್ರ ಬಲ್ಲಾಳ್ ಉಪಸ್ಥಿತರಿದ್ದರು.

ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ, ನಟರಾಜ್ ಉಪಾಧ್ಯಾಯ ವಂದಿಸಿದರು. ನಾರಾಯಣ ಎಮ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಮಂಡಳಿ ಬಾಲಕಲಾವಿದ ರಿಂದ ಯಕ್ಷಗಾನ ೞಪೂರ್ವರಂಗ ಹಾಗೂ ಕೊನೆಯಲ್ಲಿ ಯಕ್ಷಗಾನ ‘ರುಕ್ಮಿಣೀ ಕಲ್ಯಾಣ’ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News