ಮಣಿಪಾಲ: ಎನ್‌ಆರ್‌ಸಿ ವಿರುದ್ಧ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯ ಪ್ರತಿಭಟನೆ

Update: 2020-01-27 16:17 GMT

ಮಣಿಪಾಲ, ಜ.27: ಉಡುಪಿ ಜಿಲ್ಲಾ ಎಸ್‌ಐಓ ನೇತೃತ್ವದಲ್ಲಿ ಮಣಿಪಾಲ ಮಾಹೆ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳು ಹಾಗೂ ಪ್ರಗತಿಪರ ಚಿಂತಕರಿಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಇಂದು ಸಂಜೆ 7ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿತ್ತು.

ಎಸ್‌ಐಓ ಕಾರ್ಯಕರ್ತರು, ಮಣಿಪಾಲ ಮಾಹೆಯ ವಿದ್ಯಾರ್ಥಿಗಳು, ಪ್ರಗತಿಪರ ಹೋರಾಟಗಾರರು, ಚಿಂತಕರು ಕ್ಯಾಂಡಲ್ ಹಚ್ಚಿಕೊಂಡು, ಹಿಂದೂ ಸ್ತಾನ್ ಹಾಗೂ ಆಝಾಧಿ ಘೋಷಣೆಗಳನ್ನು ಕೂಗಿದರು. ಈ ಮಧ್ಯೆ ವಿದ್ಯಾರ್ಥಿ ಗಳು ಎನ್‌ಆರ್‌ಸಿ ವಿರೋಧಿಸಿ ಹಾಡು, ಕವನ, ಶಾಹಿರಿ, ಸ್ಲೋಗನ್ಸ್ ಗಳನ್ನು ವಾಚಿಸಿದರು. ಅದೇ ರೀತಿ ಬೀದಿನಾಟಕಗಳನ್ನು ಕೂಡ ಇದೇ ಸಂದರ್ಭ ದಲ್ಲಿ ಪ್ರದರ್ಶಿಸಲಾಯಿತು.

ಎಸ್‌ಐಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಪ್ರಮುಖ ಭಾಷಣ ಮಾಡಿ ದರು. ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ಚಿಂತಕ ಪ್ರೊ.ಫಣಿರಾಜ್, ನಗರಸಭೆ ಸದಸ್ಯ ರಮೇಶ್ ಕಾಂಚನ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಮುಹಮ್ಮದ್ ವೌಲಾ, ನಾರಾಯಣ ಕುಂದರ್, ಸಂವರ್ತ್ ಸಾಹಿಲ್, ಎಸ್‌ಐಓ ವಿವಿಧ ಘಟಕಗಳ ಅಧ್ಯಕ್ಷ ಅಫ್ವಾನ್ ಹೂಡೆ, ಫೈಝಲ್ ಮಲ್ಪೆ, ಫಝೀಲ್ ಉಡುಪಿ ಉಪಸ್ಥಿತರಿದ್ದರು. ಎಸ್‌ಐಓ ಜಿಲ್ಲಾಧ್ಯಕ್ಷ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News