ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಪ್ರತಿಷ್ಠಿತ ಸ್ಕೋಚ್ ಪ್ರಶಸ್ತಿ

Update: 2020-01-27 16:25 GMT

ಮಣಿಪಾಲ, ಜ.27: ಸ್ವಾಸ್ಥ್ಯ ಭಾರತದ ಅಂಗವಾಗಿ ಕೈ ನೈರ್ಮಲ್ಯವನ್ನು ಉತ್ತೇಜಿಸಿದ ಕೊಡುಗೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಸ್ಕೋಚ್ ಬೆಳ್ಳಿ ಪ್ರಶಸ್ತಿ ಪಡೆದಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮತ್ತು ಕುಲಪತಿ ಡಾ. ವಿನೋದ ಭಟ್ ಅವರು ಕೆಎಂಸಿ ಆಸ್ಪತ್ರೆಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಜಿಬು ಥಾಮಸ್ ಅವರಿಗೆ ಸ್ಕೋಚ್ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಮಾಹೆ ಮಣಿಪಾಲದ ಸಹಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ, ಕುಲಸಚಿವ ಡಾ.ನಾರಾಯಣ ಸಭಾಹಿತ, ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ ಹೆಗ್ಡೆ ಉಪಸ್ಥಿತರಿದ್ದರು. ಈ ಪ್ರಶಸ್ತಿಯೊಂದಿಗೆ ಕೆಎಂಸಿ ತನ್ನ ಪ್ರಶಸ್ತಿಗಳ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ.

2003ರಲ್ಲಿ ಸ್ಥಾಪನೆಯಾದ ಸ್ಕೋಚ್ ಪ್ರಶಸ್ತಿ, ಸ್ವತಂತ್ರ ಸಂಸ್ಥೆಯಾದ ಸ್ಕಾಚ್ ಗ್ರೂಪ್ ನೀಡುವ ದೇಶದ ಅತ್ಯುನ್ನತ ಗೌರವವಾಗಿದೆ. ಭಾರತವನ್ನು ಉತ್ತಮ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುವ ಜನರು, ಯೋಜನೆಗಳು ಮತ್ತು ಸಂಸ್ಥೆಗಳನ್ನು ಇದು ಗುರುತಿಸಿ ಪ್ರಶಸ್ತಿಯೊಂದಿಗೆ ಗೌರವಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News