ತನ್ನ ಪೌರರಿಗೆ ಸೌದಿ ಆರೇಬಿಯ ಭೇಟಿಗೆ ಅವಕಾಶ ನೀಡಿದ ಇಸ್ರೇಲ್

Update: 2020-01-27 16:50 GMT

 ಜೆರುಸಲೇಂ,ಜ.26: ಧಾರ್ಮಿಕ ಹಾಗೂ ಔದ್ಯಮಿಕ ಕಾರಣಗಳಿಗಾಗಿ ಸೌದಿ ಅರೇಬಿಯಕ್ಕೆ ಪ್ರಯಾಣಿಸಲು ಇನ್ನು ಮುಂದೆ ತಾನು ಅವಕಾಶ ನೀಡುವುದಾಗಿ ಇಸ್ರೇಲ್‌ನ ಗೃಹ ಸಚಿವಾಲಯ ರವಿವಾರ ತಿಳಿಸಿದೆ.

  ಇಸ್ರೇಲ್‌ ನ ಈ ಪ್ರಕಟಣೆಯು ಉಭಯದೇಶಗಳ ನಡುವಿನ ಬಾಂಧವ್ಯಗಳು ಸೌಹಾರ್ದಯುತವಾಗುತ್ತಿರುವುದರ ಸೂಚನೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಪ್ರಕಟಿಸಲಿರುವ ಮಧ್ಯಪ್ರಾಚ್ಯ ಶಾಂತಿ ಒಪ್ಪಂದಕ್ಕೆ ಸೌದಿ ಅರೇಬಿಯದ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಇಸ್ರೇಲ್ ಈ ಕ್ರಮ ಕೈಗೊಂಡಿರುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

   

ಇಸ್ರೇಲ್‌ನ ರವಿವಾರದ ಪ್ರಕಟಣೆಯಿಂದಾಗಿ, ಇಸ್ರೇಲಿ ಮುಸ್ಲಿಮರು ಸೌದಿ ಆರೇಬಿಯಾಗೆ ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳಬಹುದಾಗಿದೆ. ಈ ಮೊದಲು ಇಂತಹ ಭೇಟಿಗಳಿಗೆ ಸರಕಾರದ ವಿಶೇಷ ಅನುಮತಿ ಬೇಕಾಗುತ್ತಿತ್ತು ಎಂದು ಸಚಿವಾಲಯವು ತಿಳಿಸಿದೆ. ಇದೇ ಮೊದಲ ಬಾರಿಗೆ ಯಹೂದಿ ಇಸ್ರೇಲಿಗಳು ಉದ್ಯಮ ವ್ಯವಹಾರಗಳಿಗಾಗಿ ಸೌದಿ ಅರೇಬಿಯವನ್ನು ಸಂದರ್ಶಿಸಲು ಕೂಡಾ ಅನುಮತಿ ನೀಡಲಾಗಿದೆ. ಆದಾಗ್ಯೂ ಇಸ್ರೇಲ್‌ನ ಈ ಘೋಷಣೆಗೆ ಸೌದಿ ಅರೇಬಿಯದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News