ಅಲ್‌ಬಿರ್ರ್‌ ಕಿಡ್ಸ್ ಫೆಸ್ಟ್ -2020: ಮೂಡುಬಿದಿರೆ ಚಾಂಪಿಯನ್

Update: 2020-01-27 17:03 GMT

ಮಂಗಳೂರು: ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯಾದಲ್ಲಿ ನಡೆದ ಅಲ್‌ಬಿರ್ರ್‌ ಕಿಡ್ಸ್ ಫೆಸ್ಟ್‌ನ ಚಾಂಪಿಯನ್ ಪಟ್ಟವನ್ನು ಮೂಡುಬಿದಿರೆಯ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್‌ಬಿರ್ರ್‌ ಸ್ಕೂಲ್ ಅಲಂಕರಿಸಿದೆ.

ಸ್ಪರ್ಧೆಯಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡದ ಜಿಲ್ಲೆಯ ಅಲ್‌ಬಿರ್ರ್‌ ಇಸ್ಲಾಮಿಕ್ ಪ್ರೀ ಸ್ಕೂಲ್‌ಗಳ ಸುಮಾರು 144 ಪುಟಾಣಿಗಳು ಪಾಲ್ಗೊಂಡಿದ್ದರು. ರನ್ನರ್ ಅಪ್ ಆಗಿ ಅಡ್ಡೂರು ಅಲ್‌ಬಿರ್ರ್‌ ಸ್ಕೂಲ್ ಹೊರಹೊಮ್ಮಿದೆ.

ಟ್ರೋಫಿಗಳನ್ನು ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಅಡ್ಡೂರು ಬಿ.ಜೆ.ಎಂ. ಖತೀಬರಾದ ಮುಹಮ್ಮದ್ ಶರೀಫ್ ದಾರಿಮಿ ಹಾಗೂ ಅಲ್‌ಬಿರ್ರ್‌ ಕೇರಳ ಕೋರ್ಡಿನೇಟರ್ ಇಸ್ಮಾಯೀಲ್ ಮುಜದ್ದಿದಿ ವಿತರಿಸಿದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ. ಸೈಯದ್ ಅಧ್ಯಕ್ಷತೆ ವಹಿಸಿದರು.

ಉದ್ಘಾಟನಾ ಸಮಾರಂಭ

ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ದ.ಕ. ಜಿಲ್ಲೆ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಅಲ್‌ಬಿರ್ರ್‌ ಕಿಡ್ಸ್ ಫೆಸ್ಟ್ ಸ್ಟೇಟ್ ಕನ್ವಿನರ್ ಜಾಬೀರ್ ಹುದವಿ ಮುಖ್ಯಭಾಷಣಗೈದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಧ್ವಜಾರೋಹಣಗೈದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹೀಂ, ಬಿ.ಎಚ್. ಖಾದರ್ ಬಂಟ್ವಾಳ, ಮುಹಮ್ಮದ್ ಸಫ್ವಾನ್ ವಿಟ್ಲ, ರಫೀಕ್ ಮಾಸ್ಟರ್, ಡಿ.ಎಸ್ ರಫೀಕ್ ಪಾಲ್ಗೊಂಡಿದ್ದರು.

ಅಲ್‌ಬಿರ್ರ್‌ ಚೇರ್‌ಮ್ಯಾನ್‌ಗಳಾದ ಟಿ.ಎಂ. ಹನೀಫ್ ಮುಸ್ಲಿಯಾರ್, ಮುಹಮ್ಮದ್ ಆಸಿಫ್, ಅಝೀಝ್ ಮಲಿಕ್, ಟಿ.ಪಿ. ಜಮಾಲುದ್ದೀನ್ ದಾರಿಮಿ, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಎ.ಎಸ್. ಬಾವುಂಞಿ, ನೌಶಾದ್ ಹಾಜಿ ಸೂರಲ್ಪಾಡಿ, ಅಹ್ಮದ್ ಬಾವಾ ಅಂಗಡಿಮನೆ, ಎಂ.ಎಸ್. ಶೇಖ್ ಮೋನು, ಎ.ಕೆ. ಅಶ್ರಫ್, ಇಸ್ಹಾಕ್ ಗರಡಿ, ಇಸ್ಹಾಕ್ ಅಡ್ಡೂರು, ಅಲ್‌ಬಿರ್ರ್‌ ಕೋರ್ಡಿನೇಟರ್‌ಗಳಾದ ಶರೀಫ್ ಮಳಲಿ ಕೈಕಂಬ, ಮುಹಮ್ಮದ್ ಇರ್ಫಾನ್ ಹುದವಿ ವಿಟ್ಲ, ಮುಹಮ್ಮದ್ ಶಾಫಿ ಮೂಡುಬಿದಿರೆ, ಉಮರ್ ಫಾರೂಕ್ ಅಡ್ಡೂರು ಮುಂತಾದವರು ಪಾಲ್ಗೊಂಡಿದ್ದರು.

ಸ್ವಾಗತ ಸಮಿತಿ ಕನ್ವಿನರ್ ಅಕ್ಬರ್ ಅಲಿ ಅಡ್ಡೂರು ಸ್ವಾಗತಿಸಿ, ಮುಸ್ತಫಾ ಹನೀಫಿ ವಂದಿಸಿದರು.

ಗಮನ ಸೆಳೆದ ಅಲ್‌ಬಿರ್ರ್‌ ಎಕ್ಸ್‌ಪೋ:

ಮುಹಮ್ಮದ್ ಯಾಸೀರ್ ಕಲ್ಲಡ್ಕ ನೇತೃತ್ವದಲ್ಲಿ ಸಂಗ್ರಹನಾತ್ಮಕ ಹಾಗೂ ವೈಶಿಷ್ಟಪೂರ್ಣ ನಾಣ್ಯಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಅಲ್ಲದೆ ಅಲ್‌ಬಿರ್ರ್‌ ಸ್ಕೂಲ್‌ನ ವಿದ್ಯಾರ್ಥಿಗಳ ಪೋಷಕರು ರಚಿಸಿದ ವಿವಿಧ ಇಸ್ಲಾಮಿಕ್ ಕಲಾಕೃತಿಗಳು ವಸ್ತುಪ್ರದರ್ಶನವನ್ನು ವೈವಿಧ್ಯಮಯಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News