ಎಂಸಿಸಿ ಬ್ಯಾಂಕಿನಲ್ಲಿ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಕಾರ್ಯಕ್ರಮ

Update: 2020-01-28 12:05 GMT

ಮಂಗಳೂರು: ಎಂ.ಸಿ.ಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಮೂರನೇ ತ್ರೈಮಾಸಿಕ ಕಾರ್ಯಕ್ಷಮತೆಯ ವಿಮರ್ಶೆಯು ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ವಹಿಸಿದ್ದರು. ಬ್ಯಾಂಕಿನ ನಿರ್ದೇಶಕಿ ಐರಿನ್ ರೆಬೆಲ್ಲೊ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.

ಬ್ಯಾಂಕಿನ ಮಹಾ ಪ್ರಬಂದಕರಾದ ಸುನಿಲ್ ಮಿನೇಜಸ್ ಇವರು ಸ್ವಾಗತಿಸಿ ಮೂರನೇ ತ್ರೈಮಾಸಿಕ ಕಾರ್ಯಕ್ಷಮತೆಯ ವಿಮರ್ಶೆಯನ್ನು ನಡೆಸಿ ಕೊಟ್ಟರು. ಮೂರನೇ ತ್ರೈಮಾಸಿಕ ಗುರಿಯನ್ನು ತಲುಪಿದ ಶಾಖೆಗಳನ್ನು ಅಭಿನಂದಿಸಿ, ಸಿಬ್ಬಂದಿಗಳು ವೈಯಕ್ತಿಕ ಹಾಗೂ ಶಾಖೆಯ ಗುರಿ ಮುಟ್ಟಲು ಶ್ರಮಿಸಬೇಕೆಂದು ಕರೆ ಕೊಟ್ಟರು.

Priority Section Lending  ಬಗ್ಗೆ ಎಸ್‍ಬಿಐ ನಿವೃತ ಡಿಜಿಎಮ್ ಎಸ್. ಎಚ್. ವಿಶ್ವೇಶ್ಯರಯ್ಯಾ ಇವರು ಮಾಹಿತಿ ನೀಡಿದರು. ಸಿಬಂದಿಯ ಕರ್ತವ್ಯಗಳು ಮತ್ತು ಜವಬ್ದಾರಿ ಬಗ್ಗೆ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಮೈಕಲ್ ಡಿ’ಸೋಜ ಇವರು ಮಾಹಿತಿ ನೀಡಿದರು.

ಜ.23ರಂದು 50 ವರ್ಷ ತುಂಬಿದ ನಿರ್ದೇಶಕ ಎಲ್‍ರೊಯ್ ಕಿರಣ್ ಕ್ರಾಸ್ಟೊ ಇವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು. ಜ.14ರಂದು 50 ವರ್ಷ ತುಂಬಿದ ಕುಲಶೇಕರ ಶಾಖೆಯ ಶಾಖಾ ವ್ಯವಸ್ಥಾಪಕಿ ಬ್ಲಾಂಚ್ ಫೆರ್ನಾಂಡಿಸ್ ಇವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು.

ಬ್ಯಾಂಕ್ ನಿಗದಿಪಡಿಸಿದ ವೈಯಕ್ತಿಕ ಗುರಿಯನ್ನು ಮುಟ್ಟಿದ ಸುರತ್ಕಲ್, ಕಿನ್ನಿಗೊಳಿ ಹಾಗೂ ಬಿ.ಸಿ.ರೊಡ್ ಶಾಖೆಯ ವ್ಯವಸ್ಥಾಪ ಕರು ಹಾಗು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಜನವರಿ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿದ ಸಿಬ್ಬಂದಿಯವರಿಗೆ ಹುಟ್ಟು ಹಬ್ಬದ ಶುಭಾಷಯವನ್ನು ಕೋರಲಾಯಿತು.

ಬ್ಯಾಂಕಿನ ಅಧ್ಯಕ್ಷ್ಯ ಅನಿಲ್ ಲೋಬೊ ತಮ್ಮ ಅಧ್ಯಕ್ಷಿಯ ಮಾತಿನಲ್ಲಿ, ಶಾಖೆಗಳಿಗೆ ನೀಡಿದ ಗುರಿಯನ್ನು ತಲುಪಿದ ಶಾಖೆಗಳಿಗೆ ಅಭಿನಂದಿಸಿದರು. ನಿರ್ದೇಶಕರಾದ ಎಲ್‍ರೊಯ್ ಕಿರಣ್ ಕ್ರಾಸ್ಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ವ್ರತ್ತಿಪರ ನಿರ್ದೇಶಕ ಮೈಕಲ್ ಡಿಸೋಜಾ ಹಾಜರಿದ್ದರು. ಉಪಮಹಾಪ್ರಬಂಧಕ ರಾಜ್ ಮಿನೇಜಸ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News