ಕಾಲ್-ಸೆಂಟರ್ ವಂಚನೆ: 3 ಭಾರತೀಯರು ಸೇರಿ 8 ಮಂದಿಗೆ ಜೈಲು

Update: 2020-01-28 16:01 GMT

ವಾಶಿಂಗ್ಟನ್, ಜ. 28: ಭಾರತದಲ್ಲಿರುವ ಕಾಲ್-ಸೆಂಟರೊಂದರ ಮೂಲಕ ಕರೆ ಮಾಡಿ ಸಾವಿರಾರು ಅಮೆರಿಕನ್ನರಿಗೆ 3.7 ಮಿಲಿಯ ಡಾಲರ್ (ಸುಮಾರು 26 ಕೋಟಿ ರೂಪಾಯಿ) ವಂಚಿಸಿದ 8 ಮಂದಿಗೆ ಅಮೆರಿಕದ ನ್ಯಾಯಾಲಯವೊಂದು ವಿವಿಧ ಪ್ರಮಾಣದ ಜೈಲು ಶಿಕ್ಷೆಗಳನ್ನು ವಿಧಿಸಿದೆ. ಈ ಪೈಕಿ ಮೂವರು ಭಾರತೀಯ ಅಮೆರಿಕನ್ನರು.

ಅವರ ಜೈಲು ಶಿಕ್ಷೆ ಅವಧಿಯು ಆರು ತಿಂಗಳಿಂದ ಹಿಡಿರುದ 4 ವರ್ಷ 9 ತಿಂಗಳವರೆಗಿದೆ.

ಮಾಹಿತಿ ಮಾರಾಟಗಾರರು ಮತ್ತು ಇತರ ಮೂಲಗಳಿಂದ ಪಡೆಯಲಾದ ಮಾಹಿತಿಗಳನ್ನು ಬಳಸಿಕೊಂಡು ಕಾಲ್‌ಸೆಂಟರ್ ಉದ್ಯೋಗಿಗಳು ಅಮೆರಿಕದ ನಾಗರಿಕರಿಗೆ ಕರೆ ಮಾಡಿ ತಾವು ಅಮೆರಿಕದ ಕಂದಾಯ ಇಲಾಖೆ ಅಧಿಕಾರಿಗಳು ಅಥವಾ ಸಾಲ ಕೊಡುವವರು ಎಂಬುದಾಗಿ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದರು.

ಬಳಿಕ, ಸರಕಾರಕ್ಕೆ ನೀವು ತೆರಿಗೆ ಪಾವತಿಸದಿದ್ದರೆ ನಿಮ್ಮನ್ನು ಬಂಧಿಸುವೆವು, ಜೈಲಿಗೆ ಹಾಕುವೆವು ಅಥವಾ ದಂಡ ವಿಧಿಸುವೆವು ಎಂಬುದಾಗಿ ಬೆದರಿಸುತ್ತಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News