ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕೆ.ಸುರೇಶ್ ನಾಯಕ್

Update: 2020-01-28 16:46 GMT

ಉಡುಪಿ, ಜ.28: ಜಿಲ್ಲೆಯ ಪ್ರಮುಖ ಸಾರಿಗೆ ಉದ್ಯಮಿ ಹಾಗೂ ಹಾಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇಮಿಸಿದ್ದಾರೆ.

ಉಡುಪಿ ಜಿಲ್ಲೆಯಿಂದ ಶಿಫಾರಸ್ಸು ಮಾಡಿ ಕಳುಹಿಸಲಾದ ಮೂರು ಹೆಸರು ಗಳಲ್ಲಿ 50ರ ಹರೆಯದ ಸುರೇಶ್ ನಾಯಕ್ ಅವರ ಹೆಸರಿಗೆ ನಳಿನ್‌ಕುಮಾರ್ ಒಪ್ಪಿಗೆಯ ಮುದ್ರೆ ಒತ್ತಿದರು. ಸುರೇಶ್ ನಾಯಕ್ ಅವರೊಂದಿಗೆ ಉತ್ತರಕನ್ನಡ ಮತ್ತು ಮೈಸೂರು ಸೇರಿದಂತೆ ಇನ್ನೂ 11 ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರ ಹೆಸರು ಗಳನ್ನು ಪ್ರಕಟಿಸಲಾಯಿತು.

ಅಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ ಪದವೀಧರರಾ ಗಿರುವ ಸುರೇಶ್ ಕುಮಾರ್, ಉಡುಪಿಯ ಪ್ರಮುಖ ಸಾರಿಗೆ ಉದ್ಯಮಿ. 1986ರಿಂದ ಆರ್‌ಎಸ್ಸೆಸ್‌ನಲ್ಲಿರುವ ಸುರೇಶ್, 1989ರಿಂದ ಸಾಮಾನ್ಯ ಕಾರ್ಯ ಕರ್ತಾಗಿ ಬಿಜೆಪಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ.

1996ರಲ್ಲಿ ಬಿಜೆಪಿ ಉಡುಪಿ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಇವರು, 2005ರಿಂದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, 2008ರಲ್ಲಿ ಉಡುಪಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, 2010ರಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, 2011ರಲ್ಲಿ ಉಡುಪಿ ತಾಲೂಕು ಎಪಿಎಂಸಿ ಅಧ್ಯಕ್ಷ, 2013ರಲ್ಲಿ ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News