ಎಂ.ಎಸ್ಸಿ ಪರೀಕ್ಷೆ: ಸಮೀನಾಗೆ ದ್ವಿತೀಯ ರ್ಯಾಂಕ್

Update: 2020-01-28 17:30 GMT

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯಾಗಿರುವ ಸಮೀನಾ ರವರು ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ 2018 - 19 ನೇ ಸಾಲಿನ ಎಂ.ಎಸ್ಸಿ(ಎಂಎಲ್ಟಿ) ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿ  ದ್ವಿತೀಯ ರ್ಯಾಂಕ್ ಪಡೆದು ಉತ್ತೀರ್ಣರಾಗಿರುತ್ತಾರೆ.

 2016-17 ನೇ ಸಾಲಿನ  ಬಿಎಸ್ಸಿ(ಎಂಎಲ್‍ಟಿ) ಯಲ್ಲಿ ಈಕೆ 3ನೇ ರ್ಯಾಂಕ್ ಪಡೆದಿದ್ದರು. ಸೈಂಟ್ ಅ್ಯಗ್ನೆಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಇವರು ಸಾಮಾಜಿಕ ಕಾರ್ಯಕರ್ತ  ಅಬ್ಬಾಸ್ ಉಚ್ಚಿಲ್ ಮತ್ತು ಮೈಮುನ ದಂಪತಿಯ ದ್ವಿತೀಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News