ಮಂಗಳೂರು: ಮಿಸ್ಬಾ ಝೀ ಕ್ಯೂ ಪೆಸ್ಟ್-2020, ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Update: 2020-01-28 18:08 GMT

ಮಂಗಳೂರು: ಮಿಸ್ಬಾ ಝೀ ಕ್ಯೂ ಪೆಸ್ಟ್-2020 ಹಾಗೂ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಸುರತ್ಕಲ್ ಮಿಸ್ಬಾ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನೆರವೇರಿತು.

ಕಾರ್ಯಕ್ರಮದಲ್ಲಿ ತ್ವೈಬಾ ಎಜುಕೇಶನ್ ಗಾರ್ಡನ್ ಕಾರ್ಕಳ ಇದರ ಅಧ್ಯಕ್ಷರಾದ ಅಸಯ್ಯದ್ ಅಬ್ದುಲ್ ರಹ್ಮಾನ್ ಸಾದತ್ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೂತನ ತರಗತಿ ಕೋಣೆಗಳ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಯೆನಪೋಯ ಮಹಾವಿದ್ಯಾಲಯದ ಕುಲಪತಿ ಅಲ್ ಹಾಜ್ ಯೆನಪೋಯ ಅಬ್ದುಲ್ಲಾ ಕುಂಞಿ ಅವರು ಹೆಣ್ಣು ಮಕ್ಕಳಿಗೆ ಉನ್ನತ  ಶಿಕ್ಷಣದಿಂದ ಮಹಿಳೆಯರ ಸಬಲೀಕರಣವಾಗುದಕ್ಕೆ ಈ ನಿಟ್ಟಿನಲ್ಲಿ ಮಿಸ್ಬಾ ನಾಲೇಜ್ ಪೌಂಡೇಶನ್ ನಡೆಸುತ್ತಿರುವ ಮಹಿಳಾ ಕಾಲೇಜು ಹಾಗೂ ಶರಿಅತ್ ಕಾಲೇಜು ಒಂದು ಉತ್ತಮ ಪ್ರಯತ್ನ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಝೀ ಕ್ಯೂ ಪೆಸ್ಟ್ ಉದ್ಘಾಟಿಸಿ ಮಾತಾನಾಡಿದ ಅಲ್ ಖಾದಿಸ್ ಎಜುಕೇಶನಲ್ ಅಕಾಡೆಮಿ ಕಾವಲಕಟ್ಟೆ ಇಲ್ಲಿನ ಅಧ್ಯಕ್ಷರಾದ ಡಾ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಅವರು ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನೂ ಜೊತೆಯಾಗಿ ಕೊಡಬೇಕೆಂದು ಸಲಹೆಯಿತ್ತರು.

ಮಿಸ್ಬಾ ನಾಲೇಡ್ಜ್ ಫೌಂಡೇಶನ್ ಅಧ್ಯಕ್ಷ ಅಲ್ ಹಾಜ್ ಬಿ.ಎಂ. ಮಮ್ತಾಝ್ ಅಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿ.ಎಂ ಅಬ್ದುಲ್ ರಹೀಂ ಎಕ್ಸಿಕಿಟಿವ್ ಡೈರೆಕ್ಟರ್, ಸಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಢ್, ಶಕೀರ್ ಅಹ್ಮದ್ ಮ್ಯಾನೆಜಿಂಗ್ ಡೈರೆಕ್ಟರ್, ಹೈಸ್ಯೂಮ್ ಸ್ಟೀಲ್ ಮಂಗಳೂರು, ಬಿ. ಬಶೀರ್ ಡೈರೆಕ್ಟರ್ ಗ್ರೂಫ್ 4 ಮಂಗಳೂರು ಹಾಗೂ ಸೈಯದ್ ತ್ವಹಾ ತಂಙಳ್ ಉಪಸ್ಥಿತರಿದ್ದರು.

ಟ್ರಸ್ಟಿಗಳಾದ ಬಿ.ಎ.ನಝೀರ್ , ಬಿ.ಐ ನಝೀರ್ ಹುಸೈನ್, ಟಿ ಎಚ್ ಮೆಹಬೂಬ್, ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಅಬ್ದುಲ್ ರಶೀದ್ ಝೈನಿ ಮತ್ತು ಫಕ್ರುದ್ದೀನ್ ಬಾವ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಬಿ.ಎಂ ಮಮ್ತಾಝ್ ಅಲಿ ಸ್ವಾಗತಿಸಿದರು. ಸಂಚಾಲಕರಾದ ಬಿ.ಎಂ  ನಝೀರ್ ವಂದಿಸಿದರು. ಅಬ್ದುಲ್ ರಶೀದ್ ಝೈನಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News