ಜ.30: ಸಾಹಿತಿ-ಕಲಾವಿದರ ‘ಸಮಾಗಮ’ ಕಾರ್ಯಕ್ರಮ

Update: 2020-01-29 17:36 GMT

ಮಂಗಳೂರು, ಜ.29: ಸಮಾನ ಮನಸ್ಕ ಗೆಳೆಯರು, ಟೀಮ್ ಇಂಡಿಯಾ ವತಿಯಿಂದ ‘ವಿಭಜನೆಯ ರಾಜಕಾರಣ ಸಾಕು, ಗಾಂಧಿಯ ಭಾರತ ಬೇಕು’ ಘೋಷಣೆಯಡಿ ಸಾಹಿತಿ-ಕಲಾವಿದರ ‘ಸಮಾಗಮ’ ಕಾರ್ಯಕ್ರಮವು ಜ.30ರಂದು ಸಂಜೆ 4:30ಕ್ಕೆ ನಗರದ ಪುರಭವನದ ಮುಂದೆ ನಡೆಯಲಿದೆ.

ಕವಿತೆ ವಾಚನ, ಹಾಡುಗಳು, ಘೋಷಣೆಗಳು
ಜ.30. ಗಾಂಧಿ ಬಲಿದಾನದ ದಿನ. ಗೋಡ್ಸೆ ಎಂಬ ಬಲಪಂಥೀಯ ಮತೀಯವಾದಿ ಸಿದ್ದಾಂತದ ಪ್ರತಿನಿಧಿ ಸೌಹಾರ್ದ ಭಾರತಕ್ಕಾಗಿ ಅವಿಶ್ರಾಂತ ದುಡಿಯುತ್ತಿದ್ದ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಕೊಂದ ದಿನ. ಆ ಕೊಲೆ ಭಾರತದ ಆತ್ಮವನ್ನೆ ಅಲುಗಾಡಿಸಿತು. ವಿಭಜನೆಯ ರಾಜಕಾರಣಕ್ಕೆ ಬುನಾದಿಯನ್ನು ಹಾಕಿತು. ಈಗ ಜಾತ್ಯತೀತ ಭಾರತ, ಸಂವಿಧಾನ ಎದುರಿಸುತ್ತಿರುವ ಅಪಾಯದ ಮೂಲ ಇರುವುದು ಗಾಂಧಿ ಹತ್ಯೆಯಲ್ಲಿ. ಇನ್ನಾದರು ರಕ್ತದಾಹಿ ವಿಭಜನೆಯ ರಾಜಕಾರಣಕ್ಕೆ ಕೊನೆ ಹಾಡಬೇಕಿದೆ. ಗಾಂಧಿ ಕನಸಿನ ಮತ ಸೌಹಾರ್ದ ಭಾರತದತ್ತ ಹೆಜ್ಜೆ ಹಾಕಬೇಕಿದೆ. ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಆ ಹಿನ್ನಲೆಯಲ್ಲಿ ನಗರದ ಪುರಭವನದ ಮುಂದೆ ಕವಿಗಳು, ಬರಹಗಾರರು, ಕಲಾವಿದರು, ಸಾಹಿತಿಗಳು, ಹೋರಾಟಗಾರರ ‘ಸಮಾಗಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ದೇಶದ ವಿದ್ಯಮಾನಗಳ ಹಿನ್ನಲೆಯಲ್ಲಿ ಕವಿತೆ ವಾಚನ, ಹಾಡುಗಳು, ಚಿತ್ರ ಬಿಡಿಸುವಿಕೆ ಮುಂತಾದ ಕಲಾತ್ಮಕ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News