ಗೌರವ ಡಾಕ್ಟರೇಟ್‍ಗೆ ಅಬ್ದುಲ್ ಶಕೀಲ್ ದೇರಳಕಟ್ಟೆ ಆಯ್ಕೆ

Update: 2020-01-29 18:24 GMT

ಉಳ್ಳಾಲ: ಸೈಂಟ್ ಪಾವ್ಲ್ ಸ್ ಇಂಟರ್‍ನೇಶನಲ್ ಯುನಿವರ್ಸಿಟಿ ಎಸ್‍ಪಿಐಯು (ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭವನ್ನು 2020ರ ಫೆ.01ರ ಶನಿವಾರ ಸಂಜೆ ಕ್ರಿಸ್ಟಲ್ ಬಾಲ್‍ರೂಂ,  ಹಾಲೀಡೇ ಇನ್ನ್ ಸಭಾಂಗಣ  ಸಿಲೊಮ್, ಸಿಲೋಮ್ ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ಆಯೋಜಿಸಿದೆ.

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರಿನ ದೇರಳಕಟ್ಟೆ ರೆಂಜಾಡಿ ಮೂಲದ ಅಬ್ದುಲ್ ಶಕೀಲ್ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಲಾಗುವುದು ಎಂದು ಎಸ್‍ಪಿಐಯು ಇದರ ಭಾರತೀಯ ಪ್ರತಿನಿಧಿ ಡಾ.ಎಂ.ಬಿಸಾನ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೇರಳಕಟ್ಟೆ ರೆಂಜಾಡಿ ನಿವಾಸಿ ಅಬ್ದುಲ್ ಖಾದರ್ ಹರೇಕಳ ಮತ್ತು ಮೈಮುನಾ ದಂಪತಿ ಪುತ್ರ ಅಬ್ದುಲ್ ಶಕೀಲ್ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಂಎಂಎ ಜಾಹೀರಾತು ಮತ್ತು ಒಳಾಂಗಣ ಸೌದಿ ಅರೇಬಿಯಾ ಇದರ ವ್ಯವಸ್ಥಾಪಕ ನಿರ್ದೇಶಕ, ಗ್ರೇ ಲೈನ್ ಜಾಹೀರಾತು (ಯುಎಇ) ಇದರ ವ್ಯವಸ್ಥಾಪಕ ನಿರ್ದೇಶಕ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಆಗಿ ಅನಿವಾಸಿ ಭಾರತೀಯ ಉದ್ಯಮಿ (ಎನ್‍ಆರ್‍ಐ) ಆಗಿದ್ದಾರೆ.

ಉದ್ಯಮಿಯಾಗಿದ್ದು ಅನೇಕರಿಗೆ ವಿದೇಶ, ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಗಳನ್ನು ಒದಗಿಸಿರುವ ಅಬ್ದುಲ್ ಶಕೀಲ್ ಭಾರತೀಯ ಸಾಗರೋತ್ತರ ಕಾಂಗ್ರೆಸ್-ಕರ್ನಾಟಕ ಸೌದಿ ಅರೇಬಿಯಾ ಇದರ ಅಧ್ಯಕ್ಷ, ಟಾರ್ಗೆಟ್ ಕ್ರೀಡಾ ಕ್ಲಬ್ ಸೌದಿ ಅರೇಬಿಯಾ ಇದರ ಅಧ್ಯಕ್ಷ, ಸ್ನೇಹಮಯ ಚಾರಿಟಬಲ್ ಟ್ರಸ್ಟ್ ಇಂಡಿಯಾ ಇದರ ಟ್ರಸ್ಟಿ ಇತ್ಯಾದಿ ಜವಾಬ್ದಾರಿಗಳ ಜೊತೆಗೆ ಊರಿನ ಸ್ಥಳೀಯ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕ ತಮ್ಮನ್ನು ಸಮಾಜಕ್ಕೆ ಸಮರ್ಪಿಸಿ ಕೊಂಡು ಮಾನವೀಯತೆಯನ್ನು ಮೆರೆದು ಜನನಾಯಕರೆಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News