×
Ad

ಕರ್ನೋಡಿ ಅಂಗನವಾಡಿ ಕೇಂದ್ರದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Update: 2020-01-30 23:55 IST

ಬೆಳ್ತಂಗಡಿ, ಜ.30:ಲಾಲ ಗ್ರಾಪಂ ವ್ಯಾಪ್ತಿಯ ಕರ್ನೋಡಿ ಅಂಗನವಾಡಿ ಕೇಂದ್ರದಲ್ಲಿ ಗಣರಾಜೋತ್ಸವದ ಅಂಗವಾಗಿ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

ಗ್ರಾಮ ವಿಕಾಸ ಕೇಂದ್ರ ಲಾಲ, ಗ್ರಾಪಂ, ಅಂಗನವಾಡಿ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಲ್‌ಒ ಲಲಿತಾ ಮತದಾನ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.

ಪ್ರೇರಕಿ ಯಶೋಧಾ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾಲಕ್ಷ್ಮಿ, ಲಕ್ಷ್ಮಿ, ವಿಶಾಲಾಕ್ಷಿ, ಉಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News