×
Ad

ಉಳ್ಳಾಲ ಮಾರ್ಗತಲೆ ನದಿ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ

Update: 2020-01-30 23:57 IST

ಮಂಗಳೂರು, ಜ.30: ಉಳ್ಳಾಲದ ನೇತ್ರಾವತಿ ನದಿ ತೀರದ ಮಾರ್ಗತಲೆ ಪರಿಸರದ ಸರ್ವಧರ್ಮೀಯರು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ನೇತೃತ್ವದಲ್ಲಿ ರವಿವಾರ ಮಾರ್ಗತಲೆ ಮಸ್ಜಿದುಲ್ ಮೀರಾಜ್ ಜುಮಾ ಮಸೀದಿಯ ಆವರಣವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
ಬಳಿಕ ಪರಿಸರದ ನದಿ ತಟಗಳ ಸಹಿತ ಪ್ರಮುಖ ರಸ್ತೆಗಳನ್ನು ವಿವಿಧ ತಂಡಗಳ ಮೂಲಕ ಶುಚಿಗೊಳಿಸಲಾಯಿತು.

ಮಸೀದಿಯ ಖತೀಬ್ ಉಸ್ಮಾನ್ ಸಖಾಫಿ ದುಆಗೈದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ನಗರಸಭೆಯ ಪೌರಾಯುಕ್ತ ರಾಯಪ್ಪ, ರಾಮಕೃಷ್ಣ ಮಿಶನ್‌ನ ಸುರೇಶ್ ಶೆಟ್ಟಿ ಮತ್ತು ವಿಠಲದಾಸ ಪ್ರಭು, ರೋಶನಿ ನಿಲಯದ ನಿರ್ದೇಶಕ ಕಿಶೋರ್ ಅತ್ತಾವರ, ಪರಿಸರ ಪ್ರೇಮಿ ವಾಸುದೇವ ರಾವ್, ಅಂತಗುರಿಕಾರ ರಾಜೇಶ್ ನಾಯಕ್, ಹೆರಾಲ್ಡ್ ಡಿಸೋಜ, ಕೌನ್ಸಿಲರ್ ವೀಣಾ ಡಿಸೋಜ, ರಝಿಯಾ ಇಬ್ರಾಹೀಂ, ದೊಂಬಯ್ಯ ಇಡ್ಕಿದು, ವಿಜಯ್ ಕುಂದರ್, ಮಸೀದಿಯ ಅಧ್ಯಕ್ಷ ಆಲಿಯಬ್ಬ, ಕಮಲಾಗೌಡ ಟೀಚರ್, ಸುರೇಶ್,ರಿಚರ್ಡ್ ಡಿಸೋಜ, ಮುಹಮ್ಮದ್ ಆಸಿಫ್ ಉಳಿಯ ಮತ್ತಿತರರು ಭಾಗವಹಿಸಿದ್ದರು.

ಗುರಿಕಾರ ಅರುಣ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಲೋಯೆಡ್ ಆರ್ ಡಿಸೋಜ ವಂದಿಸಿದರು. ಸುಂದರ್ ಉಳಿಯ ಸ್ವಚ್ಛತಾ ತಂಡಗಳ ನಿರ್ವಹಣೆಗೈದರು. ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಸಂಚಾಲಕ ಮಂಗಳೂರು ರಿಯಾಝ್ ಕಾರ್ಯಕ್ರಮ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News