ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಪುಣ್ಯತಿಥಿ
ಮಂಗಳೂರು, ಜ.30: ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮಹಾತ್ಮ ಗಾಂಧೀಜಿಯ ಪುಣ್ಯತಿಥಿಯನ್ನು ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸತ್ಯ, ಅಹಿಂಸೆ ಮತ್ತು ತ್ಯಾಗದ ಸಾಕಾರಮೂರ್ತಿಯಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾರತದ ಸ್ವಾತಂತ್ರ್ಯದ ಶಿಲ್ಪಿಯಾಗಿ ಜಗತ್ತಿನ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಆದರೆ ಇಂದಿನ ಭಾರತದಲ್ಲಿ ಗಾಂಧಿ ತತ್ವಗಳನ್ನು ಅಳಿಸಿ ಹಾಕಲು ಪ್ರಯತ್ನಗಳು ನಡೆಯುತ್ತಿದ್ದು, ಭಾರತದ ಸಾರ್ವಭೌಮತೆಗೆ ಅಪಾಯದ ಮುನ್ಸೂಚನೆಯಾಗಿದೆ. ಆದ್ದರಿಂದ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಭಾರತದ ಆತ್ಮಶಕ್ತಿಯಾಗಿದೆ. ಈ ಆದರ್ಶಗಳನ್ನು ಅನುಸರಿಸುವುದೇ ಪ್ರತಿಯೊಬ್ಬ ಭಾರತೀಯ ಗಾಂಧೀಜಿಗೆ ಸಲ್ಲಿಸುವ ಶ್ರೇಷ್ಠ ಗೌರವವಾಗಿದೆ ಎಂದರು.
ಈ ಸಂದರ್ಭ ಪಕ್ಷದ ಮುಖಂಡರಾದ ಮುಹಮ್ಮದ್ ಮೋನು, ಪದ್ಮನಾಭ ನರಿಂಗಾನ, ಬಿ.ಎಂ. ಅಬ್ಬಾಸ್ ಅಲಿ, ಮಲ್ಲಿಕಾ ಪಕ್ಕಳ, ಸುರೇಶ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಪಾಲ್, ಸಿ.ಎಂ. ಮುಸ್ತಫ, ಎಸ್.ಕೆ ಸೌಹಾನ್, ಸಮರ್ಥ್ ಭಟ್, ಶಾಫಿ ಅಹ್ಮದ್ ಜಪ್ಪು, ಶೌನಕ್ ರೈ, ಪವನ್ ಎಸ್.ಕೆ. ಉಪಸ್ಥಿತರಿದ್ದರು.