×
Ad

ಆರೋಗ್ಯ ವಿಜ್ಞಾನ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Update: 2020-01-31 00:17 IST

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 2019 ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜು ಒಟ್ಟು ಒಂಬತ್ತು ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. 2019 ಫೆಬ್ರವರಿಯಲ್ಲಿ ನಡೆಸಲಾದ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಮಿಥುನ್ ಎಸ್.ವಿ ದ್ವಿತೀಯ, ಮೇಘಾ ಪ್ರಥ್ವಿರಾಜ್ ತೃತೀಯ, ನಂದಕಿಶೋರ್ ಎನ್.ಪಿ ಐದನೇ ರ್ಯಾಂಕ್, ದ್ರವ್ಯ ಪಿ ಹೆಗ್ದೆ ಎಂಟನೇ ರ್ಯಾಂಕ್,  ಅಪೂರ್ವ ಎನ್ ಒಂಬತ್ತನೇ ರ್ಯಾಂಕ್ ಗಳಿಸಿ, ಒಟ್ಟು 10 ರ್ಯಾಂಕ್‍ಗಳಲ್ಲಿ 5 ರ್ಯಾಂಕ್‍ನ್ನು ಪಡೆದುಕೊಂಡಿದೆ. 

ಅಲ್ಲದೇ ಅಕ್ಟೋಬರ್ ತಿಂಗಳಲ್ಲಿ ನಡೆಸಲಾದ ಸ್ನಾತಕೋತ್ತರ ನ್ಯಾಚುರೋಪತಿ ಪರೀಕ್ಷೆಯಲ್ಲಿ, ಡಾ. ನಿತೇಶ್ ಎಂ.ಕೆ ಮೂರನೇ ರ್ಯಾಂಕ್ ಪಡೆದರೆ, ಡಾ. ಸತಾಝ್ ರಹ್ಮಾನಿಯಾ, ಡಾ. ಸುನನ್ಯ ಎಸ್ ಆರು ಮತ್ತು ಎಂಟನೇ ರ್ಯಾಂಕ್ ಗಳಿಸಿದರೆ, ಯೋಗ ವಿಜ್ಞಾನದಲ್ಲಿ ಡಾ. ಸಾತ್ವಿಕ್ ಕೆ.ವಿ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಅಲ್ಲದೆ ಪ್ರಥಮ ಪದವಿ ವಿಭಾಗದಿಂದ ಇದುವರೆಗೆ ವಿಷಯವಾರು ಒಟ್ಟು 182 ರ್ಯಾಂಕ್‍ಗಳು ಬಂದಿವೆ.

ವಿಜೇತರ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News