×
Ad

ಉತ್ತರಪ್ರದೇಶ: ಮಕ್ಕಳ ಒತ್ತೆಯಲ್ಲಿಟ್ಟ ವ್ಯಕ್ತಿಯ ಪತ್ನಿಯನ್ನು ಕಲ್ಲೇಟಿನಿಂದ ಕೊಂದ ಸ್ಥಳೀಯರು!

Update: 2020-01-31 10:48 IST

  ಫಾರೂಖಾಬಾದ್, ಜ.31: ಬರ್ತ್ ಡೇ ಪಾರ್ಟಿಯೊಂದರಲ್ಲಿ 25 ಮಕ್ಕಳನ್ನು ಒತ್ತೆಯಲ್ಲಿಟ್ಟುಕೊಂಡಿದ್ದ ಉತ್ತರಪ್ರದೇಶದ ವ್ಯಕ್ತಿಯೊಬ್ಬರ ಪತ್ನಿಯ ಮೇಲೆ ದಾಳಿ ನಡೆಸಿದ ನೆರೆಹೊರೆಯವರು ಕಲ್ಲಿನಿಂದ ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆ ಮೃತಪಟ್ಟ್ಟಿದ್ದಾಳೆೆ.

ಮಕ್ಕಳನ್ನು ಒತ್ತೆಯಲ್ಲಿಟ್ಟುಕೊಂಡಿದ್ದ ವ್ಯಕ್ತಿ ಸುಭಾಶ್ ಬಥಾಮ್‌ನನ್ನು ಕಳೆದ ರಾತ್ರಿ ಪೊಲೀಸರು ಗುಂಡಿಟ್ಟು ಸಾಯಿಸಿದ್ದರು. ಸುಭಾಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇದೀಗ ಜಾಮೀನು ಮೇಲೆ ಹೊರಗೆ ಬಂದಿದ್ದ. ಮಕ್ಕಳನ್ನು ಒತ್ತೆಯಲ್ಲಿಟ್ಟುಕೊಂಡಿದ್ದ ಸುಭಾಶ್‌ನನ್ನು ಗುಂಡಿಟ್ಟು ಸಾಯಿಸಿದ್ದ ಪೊಲೀಸರು ಮಕ್ಕಳನ್ನು ಒತ್ತೆಸೆರೆಯಿಂದ ಮುಕ್ತಿಗೊಳಿಸಿದ್ದರು. ಆರೋಪಿಯ ಪತ್ನಿಯನ್ನು ಹಿಡಿದಿದ್ದ ಸ್ಥಳೀಯರು ಆಕೆಗೆ ಚೆನ್ನಾಗಿ ಥಳಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾಳೆ.

ಎಲ್ಲ 23 ಮಕ್ಕಳು ಸುರಕ್ಷಿತವಾಗಿದ್ದು, ಒಂದು ವರ್ಷದ ಮಗುವನ್ನು ಗುರುವಾರ ರಾತ್ರಿಯೇ ಒತ್ತೆಸೆರೆಯಿಂದ ಮುಕ್ತಗೊಳಿಸಲಾಗಿದೆ. ಮಕ್ಕಳನ್ನು ಒತ್ತೆ ಸೆರೆಯಲ್ಲಿಟ್ಟುಕೊಂಡಿದ್ದ ಸುಭಾಶ್‌ನ ಯೋಜನೆಯ ಹಿಂದೆ ಆಕೆಯ ಪತ್ನಿಯ ಕೈವಾಡವಿತ್ತೇ ಎಂದು ಗೊತ್ತಾಗಿಲ್ಲ. ಆದರೆ, ಆಕೆ ಕೂಡ 2001ರಲ್ಲಿ ನಡೆದ ಹತ್ಯೆಯ ಆರೋಪಿಯಾಗಿದ್ದಳು ಎಂದು ಪೊಲೀಸರು  ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News