'ರಿಪಬ್ಲಿಕ್ ಟಿವಿ' 6 ತಿಂಗಳು ನಿಷೇಧವಾಗಲಿ: ರಾಜದೀಪ್ ಸರ್ದೇಸಾಯಿ

Update: 2020-01-31 10:00 GMT

ಹೊಸದಿಲ್ಲಿ: ಜಾಮಿಯಾ ವಿವಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ 'ಜಾಮಿಯಾ ಪ್ರತಿಭಟನಕಾರ' ಎಂದು ಸುಳ್ಳು ಸುದ್ದಿ ಪ್ರಕಟಿಸಿದ 'ರಿಪಬ್ಲಿಕ್ ಟಿವಿ'ಯನ್ನು 6 ತಿಂಗಳ ಕಾಲ ನಿಷೇಧಿಸಬೇಕು ಎಂದು ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು , "ಕಳೆದ ಕೆಲವು ಗಂಟೆಗಳಿಂದ ಜಾಮಿಯಾದಲ್ಲಿ ವರದಿ ಮಾಡುತ್ತಿದ್ದೆ. ಅತ್ಯಂತ ನಾಗರಿಕ ಪ್ರಜಾಪ್ರಭುತ್ವದಲ್ಲಿ ಈ ಸಂಪೂರ್ಣ ಸುಳ್ಳು ಸುದ್ದಿಯೇ ಈ ಚಾನೆಲನ್ನು 6 ತಿಂಗಳ ಕಾಲ ನಿಷೇಧಿಸಲು ಸಾಕಾಗಬಹುದು! ಶುದ್ಧ ವಿಷ" ಎಂದಿದ್ದಾರೆ.

ಜಾಮಿಯಾ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ ನಡೆಸಿದಾತ ರಾಮಭಕ್ತ್ ಗೋಪಾಲ್ ಎನ್ನುವವನಾಗಿದ್ದು, ಆತ ಸಿಎಎ ವಿರೋಧಿ ಪ್ರತಿಭಟನಕಾರ ಮೇಲೆ ದ್ವೇಷ ಹೊಂದಿದ್ದ ಎನ್ನುವುದು ನಂತರ ಬಯಲಾಗಿದೆ. ಆದರೆ ಗುಂಡಿನ ದಾಳಿ ನಡೆಸಿದ್ದು, ಜಾಮಿಯಾ ಪ್ರತಿಭಟನಕಾರರು ಎಂದು ಸುಳ್ಳು ಸುದ್ದಿ ಪ್ರಕಟಿಸಿದ್ದ ರಿಪಬ್ಲಿಕ್ ಟಿವಿ ವಿರುದ್ಧ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News