ಕಣಚೂರು ಆಸ್ಪತ್ರೆಯಲ್ಲಿ ಕ್ರಾನಿಯೋಫೇಶಿಯಲ್ ಕಾರ್ಯಾಗಾರ

Update: 2020-01-31 14:41 GMT

ಕೊಣಾಜೆ: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಣಚೂರು ಇನ್ ಸ್ಟಿಟ್ಯೂಟ್ ಫಾರ್ ಅನಮೊಲೋಸಿಸ್ ವಿಭಾಗದ ವತಿಯಿಂದ ಕ್ರಾನಿಯೋಫೇಶಿಯಲ್ ಲೈವ್ ಸರ್ಜಿಕಲ್ ಕಾರ್ಯಾಗಾರವು ಜ.6 ರಿಂದ ಜ.16 ರವರೆಗೆ ನಡೆದಿದ್ದು, ಒಟ್ಟು 11 ದಿನಗಳಲ್ಲಿ 21 ಜನರಿಗೆ ಯಶ್ವಸ್ವೀ ಶಸ್ತ್ರಚಿಕಿತ್ಸೆ ನಡೆಸಲಾಗಿದೆ  ಎಂದು ಕ್ರಾನಿಯೋಫೇಶಿಯಲ್ ಮತ್ತು ಅರ್ಥೋಗಾಥ್ನಿಕ್ ಸರ್ಜನ್   ಡಾ.ಮುಸ್ತಫಾ ಖಾದರ್ ಅವರು ಹೇಳಿದರು.

ಅವರು ದೇರಳಕಟ್ಟೆ ನಾಟೆಕಲ್ ನ  ಕಣಚೂರು‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ‌ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದರು.

ಈ ಕಾರ್ಯಾಗಾರದಲ್ಲಿ  ತಜ್ಞ ವೈದ್ಯರ ಮೂಲಕ ಜಿನಿಯೋಪ್ಲಾಸ್ಟಿ, ಫ್ರಂಟೋ ಕಕ್ಷಿಯ ಪ್ರಗತಿ, ದವಡೆ ಶಸ್ತ್ರಚಿಕಿತ್ಸೆ, ಟಿ.ಎಂಜೆ ಬದಲಿ ಮತ್ತು ಪುನರ್ ನಿರ್ಮಾಣ ಮೊದಲಾದ ಚಿಕಿತ್ಸೆ ಗಳನ್ನು ಸೂಪರ್ ಸ್ಪೆಷಾಲಿಟಿ ಮಾಡ್ಯುಲರ್ ಆಪರೇಟಿಂಗ್  ರೂಮ್ ಗಳಲ್ಲಿ ನಡೆದಿದ್ದು, ಕಾರ್ಯಾ ಗಾರದ ಪ್ರತಿನಿಧಿಗಳ ಅನುಕೂಲಕ್ಕಾಗಿ ಸೆಮಿನಾರ್ ಹಾಲ್ ನಲ್ಲಿ ಲೈವ್ ಆಡಿಯೋ ಮತ್ತು ದೃಶ್ಯ ಪ್ರಸರಣದ ವ್ಯವಸ್ಥೆ ಮಾಡಲಾಗಿತ್ತು.
ಸೀಳು ತುಟಿ, ಸೀಳು ಅಂಗುಳ, ತಲೆಯ ಭಾಗದ ಶಸ್ತ್ರಚಿಕಿತ್ಸೆ, ಹಾಗೂ ಕುತ್ತಿಗೆ, ದವಡೆ ಹೀಗೆ‌ ಮೊದಲಾದ ಭಾಗಗಳಲ್ಲಿ ಸಮಸ್ಯೆಗಳನ್ನು ಹೊಂದಿದ್ದ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಇಂತಹ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ ಐದರಿಂದ ಆರು ಲಕ್ಷದವರೆಗೆ ಖರ್ಚು ತಗಲುತ್ತದೆ. ಆದರೆ ಕಣಚೂರು ಆಸ್ಪತ್ರೆಯು ಈ ಕಾರ್ಯಾಗಾರದ ಮೂಲಕ ಅತ್ಯಂತ ಕಡಿಮೆ ದರದಲ್ಲಿ ರೋಗಿಗಳ ಕೈ ಗೆಟಕುವ ವೆಚ್ಚದಲ್ಲಿ‌ ಇಂತಹ ನಡೆಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಈ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ಕ್ರಾನಿಯೋಫೇಶಿಯಲ್ ತಜ್ಞ ಡಾ.ವೀರಬಾಹು, ನರಶಸ್ತ್ರಚಿಕಿತ್ಸಕ ಡಾ.ಜುವೋವರ್ ಲೋಬೋ, ಡಾ.ಪರಿತ್ ಲಡಾನಿ, ಡಾ.ಮನುಪ್ರಸಾದ್, ಡಾ.ಶ್ರೇಯಸ್ ಸೊರಕೆ, ಡಾ.ಕೃಷ್ಣ ಮೂರ್ತಿ, ಡಾ.ಅಭಯ್  ಮೊದಲಾದವರು‌ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೊಧನಾ ಕೇಂದ್ರದ ಮುಖ್ಯಸ್ಥರಾದ ಹಾಜಿ ಯು.ಕೆ ಮೋನು, ಕಣಚೂರು ಆಸ್ಪತ್ರೆಯ  ಅಬ್ದುಲ್ ರಹ್ಮಾನ್, ವೈದ್ಯರಾದ ವಿನ್ಸೆಂಟ್ ಮಥಾಯಿಸ್, ಡಾ.ಶ್ರೀಶ ಖಂಡಿಗೆ, ಡಾ.ರೋಹನ್ ಶರೂನ್ ಮೋನಿಸ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News