ದ.ಕ.ಜಿಲ್ಲೆಯಲ್ಲಿ ಬ್ಯಾಂಕ್ ಮುಷ್ಕರ
Update: 2020-01-31 20:26 IST
ಮಂಗಳೂರು, ಜ.31: ವೇತನ ಪರಿಷ್ಕರಣೆ, ಸಮಾನ ಪಿಂಚಣಿ ಮತ್ತಿತರ ಬೇಡಿಕೆಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಶುಕ್ರವಾರ ದ.ಕ.ಜಿಲ್ಲೆಯ ವಿವಿಧೆಡೆಯ ನಾನಾ ಬ್ಯಾಂಕ್‌ಗಳ ಶಾಖೆಗಳಲ್ಲಿ ಕಾರ್ಯ ನಿರ್ವಹಿಸದೆ ಮುಷ್ಕರದಲ್ಲಿ ಪಾಲ್ಗೊಂಡರು.
ಮುಷ್ಕರದ ಬಗ್ಗೆ ಮುನ್ಸೂಚನೆ ನೀಡಿದ್ದರೂ ಕೂಡ ಅನೇಕ ಕಡೆ ಗ್ರಾಹಕರು ಬ್ಯಾಂಕ್‌ಗೆ ಆಗಮಿಸಿ ಮರಳುತ್ತಿದ್ದುದು ಕಂಡು ಬಂತು. ಶುಕ್ರವಾರ ನಗರದ ಹಂಪನಕಟ್ಟೆಯ ಕೆನರಾ ಬ್ಯಾಂಕ್ ಮುಂದೆ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಫೆ.1ರಂದೂ ಮುಷ್ಕರ : ಬೇಡಿಕೆ ಈಡೇರಿಕೆಗಾಗಿ ಶುಕ್ರವಾರ ಮುಷ್ಕರ ನಡೆಸಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಶನಿವಾರವೂ ಮುಷ್ಕರ ನಡೆಸಲಿದೆ. ರವಿವಾರ ವಾರದ ರಜೆಯಾದ ಕಾರಣ ಸತತ ಮೂರು ದಿನಗಳ ಕಾಲ ಗ್ರಾಹಕರು ಬ್ಯಾಂಕ್ ವಹಿವಾಟಿನಿಂದ ವಂಚಿತರಾಗಲಿದ್ದಾರೆ.