×
Ad

ಇಎಸ್‌ಐ ಯೋಜನೆಯಡಿ ಕಾರ್ಮಿಕರ ನೋಂದಣಿ

Update: 2020-01-31 22:21 IST

ಮಂಗಳೂರು, ಜ.31: ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ವತಿಯಿಂದ ಸುಸಜ್ಜಿತ ಆಸ್ಪತ್ರೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಎಸ್‌ಐ ಯೋಜನೆಯಡಿ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕಾಗಿದೆ.

ಉಡುಪಿ ಹಾಗೂ ದ.ಕ.ಜಿಲ್ಲಾದ್ಯಂತ ಸುಮಾರು 30 ಸಾವಿರಕ್ಕೂ ಹೆಚ್ಚು ಗೋಡಂಬಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ಇಎಸ್‌ಐ ಆಸ್ಪತ್ರೆ ಸೌಲಭ್ಯ ಕಲ್ಪಿಸಿಕೊಡುವಂತೆ ಸಂಸದೆ ಶೋಭಾ ಕರಂದ್ಲಾಜೆ, ನಿರ್ದೇಶಿಸಿರುವುದರಿಂದ ಎಲ್ಲಾ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ಒಳಪಡಿಸಲು ಕಾರ್ಮಿಕ ಸಂಘಟನೆಗಳು, ಗೋಡಂಬಿ ಉದ್ದಿಮೆದಾರರ ಸಂಘ, ಸ್ವತಃ ಕಾರ್ಮಿಕರು, ಇಎಸ್‌ಐ ಅಧಿಕಾರಿಗಳು, ಕಾರ್ಮಿಕ ಇಲಾಖಾ ಅಧಿಕಾರಿಗಳು ಹಾಗೂ ಎಲ್ಲಾ ಭಾಗೀದಾರರು ಸಮರೋಪಾದಿಯಲ್ಲಿ ಫೆ.7ರೊಳಗೆ ನೋಂದಣಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಹಾಗಾಗಿ ಕಾರ್ಮಿಕರು ಇಎಸ್‌ಐ ಯೋಜನೆಯಲ್ಲಿ ನೋಂದಾಯಿಸಿ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಮಾಹಿತಿಗಾಗಿ ಇಎಸ್‌ಐ ಕಚೇರಿ ಅಥವಾ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News