ಹಿಮಾಯತುಲ್ ಇಸ್ಲಾಂ ಸಮಿತಿಗೆ ಆಯ್ಕೆ
Update: 2020-01-31 22:33 IST
ಮಂಗಳೂರು, ಜ.31: ಮುಲ್ಕಿ ಕಾರ್ನಾಡಿನ ಹಿಮಾಯತುಲ್ ಇಸ್ಲಾಂ ಸಮಿತಿಯ ವಾರ್ಷಿಕ ಮಹಾಸಭೆಯು ಫಾರೂಕ್ ಹಾಜಿಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿ 2020-21ನೆ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಅಧ್ಯಕ್ಷರಾಗಿ ಮುನೀರ್ ಕಾರ್ನಾಡು, ಉಪಾಧ್ಯಕ್ಷರಾಗಿ ಎಂಕೆ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಮುನ್ನ, ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ಕಿಲ್ಪಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಕೇರಿ, ಲೆಕ್ಕಪರಿಶೋಧಕರಾಗಿ ಫಯಾಝ್ ಮುನ್ನ, ಸಲಹೆ ಗಾರರಾಗಿ ಮದೀನಾ ಖಾದರ್, ಸದಸ್ಯರಾಗಿ ಅಬ್ದಸ್ಸಲಾಂ ದರ್ಗಾ ರೋಡ್, ಬದ್ರು ಮುಹಮ್ಮದ್, ಇಯಾಝ್ ಕೆಎಚ್, ಪುತ್ತುಮೋನು ಕಾರ್ನಾಡು, ಶಮೀರ್ ಮೂಲ್ಕಿ, ಅಝ್ಮಿಲ್ ಮೂಲ್ಕಿ, ಹನೀಫ್ ದರ್ಗಾರೋಡ್, ಹನೀಫ್ ಹೈದರ್, ಸುಹೈಲ್ ದರ್ಗಾರೋಡ್ ಆಯ್ಕೆಯಾಗಿದ್ದಾರೆ.