×
Ad

ರಾಷ್ಟ್ರೀಯ ಓಪನ್ ಕರಾಟೆ ಸ್ಪರ್ಧೆ : ಎಂಇಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪದಕ

Update: 2020-02-01 12:11 IST

ಉಡುಪಿ : ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಇತ್ತೀಚೆಗೆ ನಡೆದ 4ನೇ ರಾಷ್ಟ್ರೀಯ ಓಪನ್ ಕರಾಟೆ ಸ್ಪರ್ಧಾಕೂಟದಲ್ಲಿ ಎಂಇಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 22 ಪದಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಝಿಯಾನ್ ಅಸದಿ, ಅಯಾನ್ ಪಾಲೋಕರ್, ನೂಮನ್ ನವಾಝ್, ರೋಶನ್ ಮಹೀತ್, ರಿಹಾನ್ ಯೂಸುಫ್, ರಿದ್ವಿ, ರಿಹಾನ್ ಅಬ್ದುಲ್ ವಾಹಿದ್, ಎಂ ತನಿಷಾ, ಅಲ್ ಮಹದಿ, ಮೆಹಾಝ್ ಮನ್ಹತ್ತನ್ ಫಾತೋಮಸ್, ಶಾಹಿಲ್ ಆಲಿ, ಅಲ್ಫಾಝ್ ಆಲಿ, ರಮೀಝ್, ಅಮಾನ್ ಶರೀಫ್, ಶೇಝಾ ಶೇಕ್, ರಿಹಾನ್ ಅಬ್ದುಲ್ ವಾಹಿದ್, ಸಾಮಿಲ್, ರಕೀಬ್ ಮತ್ತು ಅನುಶ್ರೀ ಅವರು ಪದಕಗಳನ್ನು ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಾಹೇಬ್, ಶಾಲೆಯ ಶೈಕ್ಷಣಿಕ ಮುಖ್ಯಸ್ಥೆ ಜುನೈದ ಸುಲ್ತಾನ್, ಕರಾಟೆ ಶಿಕ್ಷಕರಾದ ಕೋಶಿ ರವಿಕುಮಾರ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News