ಫೆ. 4ರಂದು ಬಹುಜನ ಕ್ರಾಂತಿ ಮೋರ್ಚಾದಿಂದ ಪರಿವರ್ತನಾ ಯಾತ್ರೆ
Update: 2020-02-01 20:15 IST
ಉಡುಪಿ, ಫೆ.1: ಬಹುಜನ ಕ್ರಾಂತಿ ಮೋರ್ಚಾದ ವತಿಯಿಂದ ಸಿಎಎ ಷಡ್ಯಂತ್ರ ವಿರೋಧಿಸಿ, ಇವಿಎಂ ರಹಸ್ಯ ಹಗರಣ ಬಯಲು, ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಗೆ ಆಗ್ರಹಿಸಿ ಪರಿವರ್ತನಾ ಯಾತ್ರೆಯನ್ನು ಫೆ.4 ರಂದು ಬೆಳಗ್ಗೆ 10 ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಯೋಜಕ ವಾಮನ್ ಮೆಶ್ರಾಮ್, ಚಿಂತಕ ಜ್ಞಾನಪ್ರಕಾಶ ಸ್ವಾಮೀಜಿ, ವೌಲಾನ ಅಬ್ದುಲ್ ಅಝ್ಹಾರಿ, ನಿಶಾ ಮೆಶ್ರಾಮ್, ಕೋರ್ಣೇಶ್ವರ ಸ್ವಾಮೀಜಿ ಮೊದಲಾದವರು ಭಾಗವಹಿಸಲಿರುವರು ದಸಂಸ ಭೀಮಘರ್ಜನೆ ಬಹುಜನ ಮುಕಿತಿ ಮೋರ್ಚಾ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ನಝೀರ್ ಬೆಳ ವಾಯಿ, ದಸಂಸ ಭೀಮ ಘರ್ಜನೆ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ರಾಷ್ಟ್ರೀಯ ಕ್ರಿಶ್ಚಿಯನ್ ಮೋರ್ಚಾದ ಸ್ಟೇಪನ್ ಪೆರೇರಾ ಉಪಸ್ಥಿತರಿದ್ದರು.