×
Ad

ದಾರ್ಶನಿಕರ ತತ್ವ, ಆದರ್ಶ ಇಡೀ ಮನುಕುಲಕ್ಕೆ ಅನ್ವಯ: ಎಡಿಸಿ

Update: 2020-02-01 20:25 IST

ಉಡುಪಿ ಫೆ.1: ಮಹನೀಯರ ಹಾಗೂ ದಾರ್ಶನಿಕರ ತತ್ವ, ಆದರ್ಶಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೇ, ಇಡೀ ಮನುಕುಲಕ್ಕೆ ಅನ್ವಯ ವಾಗಿದೆ. ಅವುಗಳನ್ನು ಎಲ್ಲಾ ವರ್ಗದ ಜನರೂ ಸ್ವೀಕರಿಸಿ, ಅವರ ಅಸ್ತಿತ್ವಕ್ಕೆ ಗೌರವ ನೀಡಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಹಾಗೂ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಹಾಗೂ ದಾರ್ಶನಿಕರ ಜನನ ವಾಗಿದ್ದು, ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಇಂದಿಗೂ ಅವರ ತತ್ವಗಳು ಪ್ರಸ್ತುತ. ಸಮಾಜಕ್ಕೆ ಅವರು ತೋರಿರುವ ದಾರಿಯನ್ನು ಅನುಸರಿಸಿ ಹಲವು ಮಂದಿ ಜೀವಿಸುತ್ತಿದ್ದರು. ಮಹನೀಯರು ಮತ್ತು ದಾರ್ಶನಿಕ ವ್ಯಕ್ತಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ತಿಳಿಸಿದರು.

ಸವಿತಾ ಮಹರ್ಷಿ ಸಮಾಜದ ಕಾರ್ಯದರ್ಶಿ ಸದಾಶಿವ ಬಂಗೇರ ಸವಿತಾ ಮಹರ್ಷಿ ಕುರಿತು ಹಾಗೂ ಮಡಿವಾಳ ಮಾಚಿದೇವ ಸಮಾಜದ ಮುಖಂಡ ಶಶಿಕಾಂತ್ ಸಾಲಿಯಾನ್ ಮಡಿವಾಳ, ಮಾಚಿದೇವ ಅವರ ಕುರಿತ ವಿಚಾರ ಮಂಡಿಸಿದರು.

ಸವಿತಾ ಮಹರ್ಷಿ ಸಮಾಜದ ಜಿಲ್ಲಾಧ್ಯಕ್ಷ ಭಾಸ್ಕರ್ ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್, ಸವಿತಾ ಮಹರ್ಷಿ ಸಮಾಜದ ಉಪಾಧ್ಯಕ್ಷ ಶಿವರಾಮ್ ಭಂಡಾರಿ ಹಂದಾಡಿ, ಸವಿತಾ ಮಹರ್ಷಿ ಸಮಾಜದ ಉಡುಪಿ ತಾಲೂಕು ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News