ಮಂಗಳೂರು- ಬಳ್ಳಾರಿ: ರಾಜಹಂಸ ಸಾರಿಗೆ ಸಂಚಾರ
ಉಡುಪಿ, ಫೆ.1: ಕರ್ನಾಟ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು- ಬಳ್ಳಾರಿ- ಮಂಗಳೂರು ಮಾರ್ಗದಲ್ಲಿ ರಾಜಹಂಸ ಹೊಸ ವಾಹನಗಳೊಂದಿಗೆ ಸಂಚಾರ ಮಾಡಲಿದೆ. ಇದರ ಸಮಯ ಹಾಗೂ ಪ್ರಯಾಣ ದರದ ವಿವರ ಈ ರೀತಿ ಇದೆ.
ಮಂಗಳೂರು-ಬಳ್ಳಾರಿ: ಮಂಗಳೂರು ಬಸ್ ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಉಡುಪಿ 8.40ಕ್ಕೆ, ಕುಂದಾಪುರ 9.30ಕ್ಕೆ, ತೀರ್ಥಹಳ್ಳಿ, ಶಿವಮೊಗ್ಗ 01.15-01.35ಕ್ಕೆ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ 4ಗಂಟೆ ಮಾರ್ಗವಾಗಿ ಸಂಚರಿಸಿ, ಬೆಳಗ್ಗೆ 06.30ಕ್ಕೆ ಬಳ್ಳಾರಿ ತಲುಪಲಿದೆ.
ಬಳ್ಳಾರಿ-ಮಂಗಳೂರು: ಬಳ್ಳಾರಿಯಿಂದ ಸಂಜೆ 5.35ಕ್ಕೆ ಹೊರಟು ಚಿತ್ರ ದುರ್ಗ 08.25-9.00, ಶಿವಮೊಗ್ಗದಿಂದ ರಾತ್ರಿ 11.30ಕ್ಕೆ ನಿರ್ಗಮಿಸಿ ಹಿಂದಕ್ಕೆ ಸಂಚರಿಸಿ, ಮಂಗಳೂರನ್ನು ಬೆಳಗ್ಗೆ 05.00 ಗಂಟೆಗೆ ತಲುಪಲಿದೆ. ಮಂಗಳೂರಿ ನಿಂದ ಬಳ್ಳಾರಿಗೆ ಒಟ್ಟು ಪ್ರಯಾಣ ದರ 600ರೂ., ಮಂಗಳೂರಿನಿಂದ ಚಿತ್ರ ದುರ್ಗಕ್ಕೆ ಒಟ್ಟು ಪ್ರಯಾಣ ದರ 500 ರೂ., ಮಂಗಳೂರಿನಿಂದ ಶಿವಮೊಗ್ಗಕ್ಕೆ ಒಟ್ಟು ಪ್ರಯಾಣ ದರ 370ರೂ. ಆಗಿದೆ.
ಸದರಿ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗ ವನ್ನು ಪಡೆದು ಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿ ಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.