ಲೋಕಪಾಲ್‌ಗೆ 74 ಕೋಟಿ ರೂ. ಅನುದಾನ

Update: 2020-02-01 15:11 GMT

ಹೊಸದಿಲ್ಲಿ, ಫೆ.1: ಕೇಂದ್ರ ಬಜೆಟ್‌ನಲ್ಲಿ 2020-21ರ ಆರ್ಥಿಕ ವರ್ಷದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಲೋಕಪಾಲ್‌ಗೆ 74. 7 ಕೋಟಿ ರೂ. ನಿಗದಿಗೊಳಿಸಿದ್ದರೆ ಕೇಂದ್ರ ಜಾಗೃತ ಆಯೋಗ(ಸಿವಿಸಿ)ಗೆ 39 ಕೋಟಿ ರೂ. ನಿಗದಿಗೊಳಿಸಲಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಲೋಕಪಾಲ್‌ಗೆ 101.29 ಕೋಟಿ ರೂ. ನಿಗದಿಗೊಳಿಸಿದ್ದು ಬಳಿಕ ಇದನ್ನು 18.01 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು. ಕಳೆದ ವರ್ಷದ ಮಾರ್ಚ್‌ನಿಂದ ಕಾರ್ಯಾರಂಭ ಮಾಡಿರುವ ಲೋಕಪಾಲ್, ಇದೀಗ ದಿಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ಕಚೇರಿ ಹೊಂದಿದೆ. ಲೋಕಪಾಲ್ ಸ್ಥಾಪನೆ ಮತ್ತು ರಚನೆಗೆ ಸಂಬಂಧಿಸಿದ ವೆಚ್ಚಕ್ಕೆ ಈ ಅನುದಾನ ನಿಗದಿಯಾಗಿದೆ. ಜೊತೆಗೆ, ಕೇಂದ್ರ ಜಾಗೃತ ಆಯೋಗ(ಸಿವಿಸಿ)ಗೆ 2020-21ರ ಸಾಲಿನಲ್ಲಿ 39 ಕೋಟಿ ರೂ. ಅನುದಾನ ನಿಗದಿಯಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಸಿವಿಸಿ ಅನುದಾನವನ್ನು 36.65 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News