×
Ad

ಭಟ್ಕಳ: ಅಂಜುಮನ್ ಶಿಕ್ಷಣ ಸಂಸ್ಥೆಗೆ ನೂತನ ಸದಸ್ಯರ ಆಯ್ಕೆ

Update: 2020-02-01 20:54 IST

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗೆ ಮುಂದಿನ 4ವರ್ಷದ ಅವಧಿಗಾಗಿ ಗುರುವಾರ ಚುನಾವಣೆ ನಡೆದಿದ್ದು ಶುಕ್ರವಾರ ತಡರಾತ್ರಿ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ.

ಈ ಬಾರಿಯ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು. ಸಂಸ್ಥೆಯ 641 ಸದಸ್ಯರ ಪೈಕಿ 531 ಸದಸ್ಯರು ತಮ್ಮ ಮತವನ್ನು ಚಲಾಯಿಸಿ ಶೇ.82.83ಮತದಾನವಾಗಿತ್ತು. ಒಟ್ಟು 51 ಅಭ್ಯರ್ಥಿಗಳು ಕಣದಲ್ಲಿದ್ದು ಅದರಲ್ಲಿ 23 ಮಂದಿ ಸದಸ್ಯರು ಆಯ್ಕೆಯಾಗಿದ್ದು ಇರುತ್ತದೆ. ತಂಝೀಮ್ ಸಂಸ್ಥೆಯ ಮಾಜಿ ಅಧ್ಯಕ್ಷ ನ್ಯಾಯವಾದಿ ಮುಹಮ್ಮದ್ ಮುಝಮ್ಮಿಲ್ ಕಾಝೀಯಾ 469 ಮತಗಳನ್ನು ಪಡೆದುಕೊಂಡಿದ್ದು ಹಾಲಿ ಅಧ್ಯಕ್ಷ ಜುಕಾಕೊ ಅಬ್ದುಲ್ ರಹೀಮ್ 463 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ.

ಹಾಲಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಶಾಬಂದ್ರಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯಿತು. ಶುಕ್ರವಾರದಂದು ರಾತ್ರಿ ಫಲಿತಾಂಶ ಘೋಷಿಸಲಾಗಿದೆ.

ಉಳಿದಂತೆ ಸದಸ್ಯರಾದ ಮುಜಮ್ಮಿಲ್ ಕಾಜಿಯಾ (469) ಮತ, ಅಬ್ದುರ್ ರಹೀಮ್ ಜುಕಾಕು (463), ಮೊಹಮ್ಮದ್ ಸಾದಿಕ್ ಪಿಲ್ಲೂರ್ (360), ಸೈಯದ್ ಹಾಶಿಮ್ ಎಸ್.ಜೆ. (351), ಕೆ.ಎಂ. ಕೋಕಾರಿ ಬುರ್ಹಾನ್ (346), ಸಲ್ಮಾನ್ ಜುಬಾಪು (346), ಮೊಹಮ್ಮದ್ ಅಹೀದ್ ಮೊಹ್ತಿಶಮ್ (339), ಮೊಹಮ್ಮದ್ ಶಫಿವುಲ್ಲಾ (339), ಮೊಹಮ್ಮದ್ ಅಮೀನ್ ರುಕ್ನುದ್ದೀನ್ (327), ಇಸ್ಮಾಯಿಲ್ ಸಿದ್ದೀಕ್ (323),  ಇರ್ಷದ್ ಅಹ್ಮದ್ ಸಿದ್ದಿಕಿ (319), ಮೊಹಮ್ಮದ್ ಇಸ್ಮಾಯಿಲ್ ಜುಬಾಪು (308), ಮೊಹಮ್ಮದ್ ನೆಹಜಾನ್ ಇಕ್ಕೇರಿ (305), ಇನಾಯತುಲ್ಲಾ ಶಬಂದ್ರಿ (297), ಅಬ್ದುರ್ ರಹ್ಮಾನ್ ಪೆಹ್ಲವಾನ್ ಬಾವ (293), ಸೈಯದ್ ಅಬ್ದುಲ್ ಅಝೀಮ್ ಎಸ್.ಎಂ. (292), ಮೊಹಮ್ಮದ್ ಜುಬೈರ್ ಅರ್ಮರ್ (290), ಸಾದುಲ್ಲಾ ರುಕ್ನುದ್ದೀನ್ (288), ಮೊಹಮ್ಮದ್ ಇರ್ಷದ್ ಗವಾಯಿ (285), ರಯೀಸ್ ಅಹ್ಮದ್ ಖತೀಬ್ (281), ಮೊಹಿದ್ದೀನ್ ರುಕ್ನುದ್ದೀನ್ (254), ಮುಬಶೀರ್ ಹಲ್ಲಾರೆ (253), ಸಜ್ಜಾದ್ ಕೋಲಾ (246) ಮತಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News