×
Ad

ಎರಡು ದಿನಗಳ ಮಲ್ಪೆ ಬೀಚ್ ಉತ್ಸವಕ್ಕೆ ಅದ್ದೂರಿ ಚಾಲನೆ

Update: 2020-02-01 22:20 IST

ಉಡುಪಿ, ಫೆ.1: ಉಡುಪಿ ಜಿಲ್ಲಾಡಳಿತ, ಮಲ್ಪೆಅಭಿವೃದ್ದಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಖೆ, ನಿರ್ಮಿತಿ ಕೆಂದ್ರ, ಪಶುಪಾಲನ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನಾ ಮಂದಿರಗಳ ಸಹಯೋಗದಲ್ಲಿ ಮಲ್ಪೆಬೀಚ್‌ನಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಮಲ್ಪೆ ಬೀಚ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಉತ್ಸವವನ್ನು ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಮಲ್ಪೆಬೀಚ್‌ನಂತೆ ಜಿಲ್ಲೆಯ ಇತರೆ ಬೀಚ್‌ಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯ ಮವನ್ನು ಇನ್ನಷ್ಟು ಅಭಿವೃದಿಗೊಳಿಸಲು ಪ್ರಯತಿ್ನಸಲಾಗುವುದು ಎಂದು ಹೇಳಿದರು.

ಮಲ್ಪೆ ಬೀಚ್‌ನ್ನು ಸೀ ವಾಕ್ ಪ್ರದೇಶದವರೆಗೆ ಅಭಿವೃದ್ದಿಗೊಳಿಸಲಾಗುವುದು. ಅಲ್ಲದೇ ಕದಿಕೆ ಬೀಚ್ ಮತ್ತು ಬೆಂಗ್ರೆ ಬೀಚ್‌ಗಳನ್ನೂ ಕೂಡ ಅಭಿವೃಧಿಗೊಳಿ ಸುವ ಉದ್ದೇಶ ಹೊಂದಲಾಗಿದೆ. ಪಡುಕರೆಯಲ್ಲಿ ಮರೀನಾ ನಿರ್ಮಾಣದ ಕುರಿತು ಸ್ಥಳಿಯ ಮೀನುಗಾರರ ಆಭಿಪ್ರಾಯ ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮರೀನಾ ನಿರ್ಮಾಣ ಕುರಿತ ಡಿಪಿಆರ್ ತಯಾರಿಸಲು ಒಂದು ಕೋಟಿ ವೆಚ್ಚವಾಗಲಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಮೀನು ಮಾರಾಟ ಪೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಜಿಪಂ ಸಿಇಓ ಪ್ರೀತಿ ಗೆಹಲೋತ್, ಕರಾವಳಿ ಕವಲು ಪಡೆ ಎಸ್ಪಿ ಚೇತನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾ ಧಿಕಾರಿ ರಾಜು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಎಸಿಟಿಯ ಮನೋಹರ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ನಿರ್ಮಿತಿ ಕೆಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಷನ್ ಡಾಕ್ಯುಮೆಂಟ್‌ಗೆ ಸಿದ್ದತೆ: ಡಿಸಿ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಯ ನೀಡುವ ನಿಟ್ಟಿನಲ್ಲಿ ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಮುಗಿಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಪಡುಬಿದ್ರೆಯಲ್ಲಿ ಬ್ಲ್ಲೂ ಪ್ಲಾಗ್ ಕಾಮಗಾರಿಗಳು ಮಾರ್ಚ್ ಅಂತ್ಯಕ್ಕೆ ಪೂರ್ಣ ಗೊಳ್ಳಲಿದ್ದು, ಈ ವರ್ಷಕ್ಕೆ ಸರ್ಟಿಫಿಕೇಟ್ ದೊರೆಯಲಿದೆ. ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃಧಿಗೆ ಈಗಾಗಲೇ ತಲಾ 5 ಕೋಟಿ ರೂ. ಬಿಡು ಗಡೆಯಾಗಿದೆ. ಮುರುಡೇಶ್ವರ ಮಾದರಿಯಲ್ಲಿ ಸೋಮೇಶ್ವರ ಬೀಚ್ ಅಭಿವೃಧಿ ಗೊಳಿಸಲು ಸುಮಾರು 50 ಕೋಟಿ ರೂ. ಗಳನ್ನು ಬಜೆಟ್ ನಲ್ಲಿ ಮೀಸಲಿಡಲು ಸಂಸದ ರಾಘವೆಂದ್ರ ಅವರಲ್ಲಿ ಕೋರಲಾಗಿದೆ. ಕೊಲ್ಲೂರಿನಲ್ಲಿ ಯುಜಿಡಿ ಮತ್ತು ನೀರಿನ ಸಂಪರ್ಕ ಕಾಮಗಾರಿಗಳು ಒಂದು ತಿಂಗಳಲ್ಲಿ ಮುಗಿಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News