ಆಶಾದಾಯಕ ಬಜೆಟ್: ಸಿಎ ಎಂ.ಬಿ. ರಾಮ್ ಭಟ್

Update: 2020-02-01 17:10 GMT

ಮಂಗಳೂರು, ಫೆ.1: ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹದಾಯಕವಾದ ಬಜೆಟ್‌ನ್ನು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ ಎಂದು ಸಿಎ ಎಂ.ಬಿ. ರಾಮ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಬಹುಕಾಲದ ಬೇಡಿಕೆಯಾಗಿದ್ದ ವೈಯಕ್ತಿಕ ವಿಭಾಗದ ತೆರಿಗೆ ಇಳಿಸುವ ಬಜೆಟ್ ಇದಾಗಿದೆ. ಕಳೆದ ವರ್ಷ ನಿರೀಕ್ಷೆ ಮಾಡಲಾಗಿತ್ತು. ಅದು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈಡೇರಿದಂತಾಗಿದೆ. ಮೂಲಸೌಕರ್ಯಗಳಾದ ರಸ್ತೆ, ಡ್ಯಾಮ್ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹೊಸ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ ಅಭಿವೃದ್ಧಿಪರವಾಗಿದೆ. ಹಿರಿಯ ನಾಗರಿಕರಿಗೆ 9,000 ಕೋಟಿ. ರೂ. ಮೀಸಲಿರಿಸಿರುವುದು ಸ್ವಾಗತಾರ್ಹ. ಅಲ್ಲದೆ, ಈ ಮೊದಲು ಬ್ಯಾಂಕ್ ಠೇವಣಿ ಒಂದು ಲಕ್ಷ ರೂ.ವರೆಗೆ ಮಾತ್ರ ವಿಮೆ ಸೌಲಭ್ಯ ಇತ್ತು. ಅದನ್ನು ಐದು ಲಕ್ಷಕ್ಕೆ ವಿಸ್ತರಿಸಿರುವುದು ಸಂತಸದ ವಿಷಯ ಎಂದರು.

ಕೇಂದ್ರವು ಎಲ್‌ಐಸಿಯ ಹೂಡಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಸಮಂಜಸವಲ್ಲ. ನಷ್ಟದಲ್ಲಿರುವ ಎಲ್‌ಐಸಿಗೆ ಫಂಡ್‌ನ ಅಗತ್ಯವಿದೆ. ಬಜೆಟ್ ಆಶಾದಾಯಕವಾದರೂ ಅದನ್ನು ಕೇಂದ್ರ ಸರಕಾರ ಕಾರ್ಯರೂಪಕ್ಕೆ ತರುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News