ಮಂಗಳೂರು: ಶಕ್ತಿ ವಸತಿ ಶಾಲೆಯಲ್ಲಿ 'ಶಕ್ತಿ ಫೆಸ್ಟ್' ಸಮಾರೋಪ
ಮಂಗಳೂರು : ಸ್ಪರ್ಧೆ ಗೆಲುವಿನ ಹಠ ಹಾಗೂ ಛಲವನ್ನು ಹುಟ್ಟಿಸುತ್ತದೆ. ಹಾಗಾಗಿ ಸೋಲನ್ನು ಅವಮಾನ ಎಂದು ಭಾವಿಸದೆ, ಸವಾಲಾಗಿ ಸ್ವೀಕರಿಸಬೇಕು ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ಶಕ್ತಿ ಫೆಸ್ಟ್ – 2020 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರವಿಶಂಕರ ವಿದ್ಯಾ ಮಂದಿರದ ಪ್ರಾಂಶುಪಾಲರಾದ ಆಶಾಪ್ರಿಯ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮತ್ತೊಬ್ಬ ಮುಖ್ಯ ಅತಿಥಿ ಹೆಸರಾಂತ ಕಲಾವಿದ ಪಿ.ಎನ್ ಆಚಾರ್ಯ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ ಲಲಿತ ಕಲೆಗಳಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಲಲಿತ ಕಲೆಗಳನ್ನು ಕಲಿತ ವಿದ್ಯಾರ್ಥಿಗಳು ಯಾವುದೇ ಉದ್ಯೋಗಗಳಿಗೆ ಅವಲಂಬಿತವಾಗದೆ ಸೋದ್ಯೋಗಗಳ ಮೂಲಕವೂ ತಮ್ಮ ಜೀವನವನ್ನು ನಡೆಸಬಹುದು ಮಾತ್ರ ವಲ್ಲದೆ ತಮ್ಮ ಸ್ವಂತ ಪ್ರತಿಭೆಯ ಮೂಲಕ ಒಬ್ಬ ಕಲಾವಿದನಾಗಿಯೂ ತನ್ನದೇ ಶೈಲಿಯ ಕಲೆಗಳನ್ನು ಪರಿಚಯಿಸಲು ಸಾಧ್ಯವಿದೆ. ಒಬ್ಬ ಕಲಾವಿದ ತನ್ನ ಸ್ವ ಆಲೋಚನೆಗಳಿಗೆ ತನ್ನ ಪ್ರತಿಭೆ ಹಾಗೂ ತಾನು ಆರಿಸಿದ ಕಲೆಯ ಮೂಲಕ ರೂಪಕೊಡುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾಯಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಒಟ್ಟು 19 ಶಾಲೆಗಳ 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲನೆಯ ದಿನದ ಸ್ಪರ್ಧೆಯಲ್ಲಿ 1 – 4 ವಿಭಾಗದಲ್ಲಿ ಕೆನರ ಶಾಲೆ ಉರ್ವ ಪ್ರಥಮ, ರಾಮಕೃಷ್ಣ ಶಾಲೆ ದ್ವಿತೀಯ, ಶಾರದಾ ವಿದ್ಯಾಲಯ ಶಾಲೆ ತೃತೀಯ ಚಾಂಪಿಯನ್ ಶಿಪ್ ಪ್ರಶಸ್ತಿಗಳಿಸಿತು. ಎರಡನೆ ದಿನದ ಸ್ಪರ್ಧೆಯಲ್ಲಿ 5 -8 ವಿಭಾಗದಲ್ಲಿ ಕೆನರಾ ಶಾಲೆ ಉರ್ವ ಪ್ರಥಮ, ಶಾರದ ವಿದ್ಯಾಲಯ ದ್ವಿತೀಯ, ರಾಮಕೃಷ್ಣ ಶಾಲೆ ತೃತೀಯ ಬಹುಮಾನಗಳಿಸಿತ್ತು.