ಸುಧಾ ಕುಮಾರಿಗೆ ಪಿಎಚ್‌ಡಿ
Update: 2020-02-03 14:32 IST
ಮಂಗಳೂರು, ಫೆ. 3: ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಧಾ ಕುಮಾರಿ ಕೆ. ‘ಕರಾವಳಿ ಕನ್ನಡದ ಕಾದಂಬರಿಗಳಲ್ಲಿ ಸಂಘರ್ಷದ ನೆಲೆಗಳು’ ಎಂಬ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.
ಇವರು ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಭಟ್ ಎ. ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.