×
Ad

'ನಾಚಿಕೆಗೇಡು': ವೂಹಾನ್ ನಲ್ಲಿರುವ ಪಾಕ್ ವಿದ್ಯಾರ್ಥಿಗಳಿಂದ ಇಮ್ರಾನ್ ಖಾನ್ ಸರಕಾರದ ವಿರುದ್ಧ ಆಕ್ರೋಶ

Update: 2020-02-03 17:05 IST

ಬೀಜಿಂಗ್: ಕೊರೋನಾವೈರಸ್ ಪೀಡಿತ ವೂಹಾನ್‍ ನಲ್ಲಿ ಸಿಕ್ಕಿಹಾಕಿಕೊಂಡಿರುವ ಪಾಕಿಸ್ತಾನದ ವಿದ್ಯಾರ್ಥಿಯೊಬ್ಬ ಪಾಕಿಸ್ತಾನ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಕ್ಷಣ ವೂಹಾನ್‍ ನಿಂದ ಪಾಕಿಸ್ತಾನಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರನ್ನು ಹೊರ ಕರೆತರುವಂತೆ ಮನವಿ ಮಾಡಿದ ಹೊರತಾಗಿಯೂ, ಅವರನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದ ಬೆನ್ನಲ್ಲೇ, ಸರ್ಕಾರದ ಕ್ರಮ ನಾಚಿಕೆಗೇಡು ಎಂದು ಹೇಳಿದ್ದಾರೆ.

600 ಮಂದಿ ಭಾರತೀಯರನ್ನು ಮತ್ತು ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ವೂಹಾನ್‍ ನಿಂದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದ ಬೆನ್ನಲ್ಲೇ ಇಮ್ರಾನ್ ಸರ್ಕಾರದ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ. ವೂಹಾನ್‍ ನಲ್ಲಿ ಹಲವು ಮಂದಿ ಪಾಕಿಸ್ತಾನಿ ವಿದ್ಯಾರ್ಥಿಗಳು ತಮ್ಮನ್ನು ಇಲ್ಲಿಂದ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇಂತಹ ಒಂದು ವಿಡಿಯೊ ವೈರಲ್ ಆಗಿದ್ದು ಭಾರತೀಯ ವಿದ್ಯಾರ್ಥಿಗಳನ್ನು ಕರೆಸಿಕೊಂಡಿರುವ ಕ್ರಮವನ್ನು ವಿದ್ಯಾರ್ಥಿಗಳು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News