ಬಜಾಲ್ ಪಕ್ಕಲಡ್ಕ: ರಸ್ತೆ ಕಾಂಕ್ರೀಟ್ ಅಪೂರ್ಣದ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

Update: 2020-02-03 12:20 GMT

ಬಜಾಲ್,ಫೆ.3: ಇಲ್ಲಿನ ಪಕ್ಕಲಡ್ಕದಿಂದ ಚರ್ಚ್‌ವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವುದನ್ನು ಖಂಡಿಸಿ ಡಿವೈಎಫ್‌ಐ ಪಕ್ಕಲಡ್ಕ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ‘ಮೂರುವರೆ ಕೋ.ರೂ. ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಗುತ್ತಿಗೆದಾರನ ಜೊತೆ ಸಮರ್ಪಕ ಸಿಬ್ಬಂದಿಗಳಿಲ್ಲ. ಬೆರಳೆಣಿಕೆಯ ಕೆಲಸಗಾರರು ಸೂಕ್ತ ಸಲಕರಣೆಗಳಿಲ್ಲದೆ ಸುತ್ತಮುತ್ತಲಿನ ಜನರಲ್ಲಿ ಕೇಳುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕಾಗಿದ್ದ ಪಾಲಿಕೆ ಇಂಜನಿಯರ್ ಅಥವಾ ಶಾಸಕರಾ ಗಲಿ ಕಾಮಗಾರಿ ಕೆಲಸಕ್ಕೆ ಸರಿಯಾಗಿ ಮತ್ತುವರ್ಜಿ ವಹಿಸುತ್ತಿಲ್ಲ. ಹಾಗಾಗಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗಿದೆ ಎಂದರು.

ಡಿವೈಎಫ್‌ಐ ಮಂಗಳೂರು ನಗರಾಧ್ಯಕ್ಷ ನವೀನ್ ಕೊಂಚಾಡಿ, ಸ್ಥಳೀಯ ಮುಖಂಡರಾದ ದೀಪಕ್ ಬೊಲ್ಲ, ಡಾ.ಪ್ಲಾಯಿಡ್ ಡಿಸೋಜ, ವಿಲ್ಫ್ರೆಡ್ ಡಿಸೋಜ, ಉದಯ ಕುಂಟಲ್‌ಗುಡ್ಡೆ, ಅಶೋಕ್ ಸಾಲ್ಯಾನ್, ಶಾಂತಾ ಪಕ್ಕಲಡ್ಕ, ಜಗದೀಶ್ ಕುಲಾಲ್, ಧೀರಜ್ ಪಕ್ಕಲಡ್ಕ, ವರಪ್ರಸಾದ್, ಅಶೋಕ್ ಎನೆಲ್ಮಾರ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಕ್ಸಿಕ್ಯೂಟಿವ್ ಇಂಜನಿಯರ್ ನರೇಶ್ ಶೆಣೈ, ದರ್ಶನ್ ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News