ಫೆ.8-9: ರಾಷ್ಟಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್
ಉಡುಪಿ, ಫೆ.3: ಬುಡುಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿ ಯೇಶನ್ ವತಿಯಿಂದ ಪ್ರಥಮ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್-2020ನ್ನು ಫೆ.8 ಮತ್ತು 9ರಂದು ಅಂಬಲಪಾಡಿ ದೇವಸ್ಥಾನದ ಜನಾರ್ದನ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ ಎಲ್ಲ ಶೈಲಿಯ ಕರಾಟೆ ಪಟುಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸ ಲಾಗಿದೆ. ಸುಮಾರು 10 ರಾಜ್ಯಗಳಿಂದ ಎರಡು ಸಾವಿರ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸಂಘಟಕ ಪ್ರಕಾಶ್ ಮಲ್ಪೆ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫೆ.8ರಂದು ಬೆಳಗ್ಗೆ 8ಗಂಟೆಗೆ ಅಂಬಲಪಾಡಿ ಜಂಕ್ಷನ್‌ನಿಂದ ಶೋಭಾ ಯಾತ್ರೆ ನಡೆಯಲಿದ್ದು, ಬೆಳಗ್ಗೆ 9ಗಂಟೆಗೆ ಸ್ಪರ್ಧೆಯನ್ನು ಅಂಬಲಪಾಡಿ ದೇವಳ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು, ನಾಡೋಜ ಜಿ.ಶಂಕರ್ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿ ಸಲಾಗುವುದು. ಜ.9ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸಂಘಟಕ ವಾಮನ್ ಪಾಲನ್, ಶಿವಕುಮಾರ್ ಅಂಬಲ ಪಾಡಿ, ಹರೀಶ್ ಅಂಬಲಪಾಡಿ, ಅಜಿತ್ ಕಪ್ಪೆಟ್ಟು ಹಾಜರಿದ್ದರು.