ಫೆ.7-8ರಂದು ಬ್ರಹ್ಮಾಕುಮಾರಿ ಶಿವಾನಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ
ಉಡುಪಿ, ಫೆ.3: ಅಂತರಾಷ್ಟ್ರೀಯ ಖ್ಯಾತಿಯ ಬ್ರಹ್ಮಾಕುಮಾರಿ ಶಿವಾನಿ ಅವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಫೆ.7 ಮತ್ತು 8ರಂದು ಉಡುಪಿಯ ಎಂಜಿಎಂ ಕಾಲೇಜಿನ ಎಎಲ್‌ಎನ್ ರಾವ್ ಮೈದಾನದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಣಿಪಾಲ ಶಾಖೆಯ ಸಂಚಾಲಕಿ ಬಿ.ಕೆ ಸೌರಭ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಫೆ.7ರಂದು ಸಂಜೆ 5:30ರಿಂದ 7:30ರವರೆಗೆ ‘ದ ಕೀ ಟು ಯುವರ್ ಹ್ಯಾಪಿ ಹೋಂ’ ಎಂಬ ವಿಷಯದ ಕುರಿತು ಮತ್ತು ಫೆ.8ರರಂದು ಬೆಳಗ್ಗೆ 6:30ರಿಂದ 8ಗಂಟೆಯವರೆಗೆ ‘ಇಮೋಷನಲ್ ಫಿಟ್ನೆಸ್ ಥ್ರೂ ಮೆಡಿಟೇಷನ್’ ಎಂಬ ವಿಷಯದ ಕುರಿತು ಬ್ರಹ್ಮಾಕುಮಾರಿ ಶಿವಾನಿ ಪ್ರವಚನ ನೀಡಲಿದ್ದಾರೆ. ಇದರಲ್ಲಿ ಸುಮಾರು 5000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಅಲ್ಲದೆ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಫೆ.7ರಂದು ಬೆಳಗ್ಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿ.ಕೆ.ಶಿವಾನಿ ‘ಟ್ರಾನ್ಸ್‌ಫರ್ಮ್ ವರ್ಕ್ ಪ್ರೆಷರ್ ಟು ವರ್ಕ್ ವಿದ್ ಪ್ಲೆಷರ್’ ಎಂಬ ವಿಷಯದ ಕುರಿತು ಸರಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಂವಾದಾತ್ಮಕ ಪ್ರವಚನ ವನ್ನು ನೀಡಲಿರುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜಯೋಗಿ ಶಿಕ್ಷಕಿ ಸುಜಾತ, ಕೆಂಪೇಗೌಡ ಉಪಸ್ಥಿತರಿದ್ದರು.