ವಿಟಿಯು ಪರೀಕ್ಷೆ : ಬಿಐಟಿ ವಿದ್ಯಾರ್ಥಿನಿ ಲುಬ್ನಗೆ 7ನೇ ರ‍್ಯಾಂಕ್
Update: 2020-02-03 21:39 IST
ಮಂಗಳೂರು, ಫೆ. 3: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2018-19ನೇ ಶೈಕ್ಷಣಿಕ ಸಾಲಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಲುಬ್ನ ಮೊಹಮ್ಮದ್ ಕು೦ಞಿ ಅವರು 7ನೇ ರ‍್ಯಾಂಕ್ ಪಡೆದಿದ್ದಾರೆ.
ಅವರು ಮಂಗಳೂರಿನ ನಂದಿಗುಡ್ಡೆ ನಿವಾಸಿ ಕೆಎ ಮೊಹಮ್ಮದ್ ಕುಂಞಿ ಹಾಗು ಖತೀಜಾ ಝಾಯಿದ ಅವರ ಸುಪುತ್ರಿ.
ಲುಬ್ನ ಅವರ ಸಾಧನೆಗೆ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಪ್ರಾಂಶುಪಾಲ ಡಾ. ಎಸ್ ಐ ಮಂಜೂರ್ ಬಾಷಾ, ವಿಭಾಗ ಮುಖ್ಯಸ್ಥ ಡಾ. ಮುಸ್ತಫಾ ಬಸ್ತಿಕೋಡಿ, ಅಧ್ಯಾಪಕ ವೃಂದ ಹಾಗು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಫೆ.8 ರಂದು ಬೆಳಗಾವಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.