ಕಾರು ಢಿಕ್ಕಿ: ಪಾದಚಾರಿ ಮೃತ್ಯು
Update: 2020-02-03 21:54 IST
ಹಿರಿಯಡ್ಕ, ಫೆ.3: ಬೊಮ್ಮರಬೆಟ್ಟು ಗ್ರಾಮದ ಕೋಟ್ನಕಟ್ಟೆ ಎಂಬಲ್ಲಿ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೋಟ್ನಕಟ್ಟೆಯ ಈಶ್ವರ ಸೇರಿಗಾರ ಎಂದು ಗುರುತಿಸಲಾಗಿದೆ. ಫೆ.1ರಂದು ರಾತ್ರಿ 8ಗಂಟೆ ಸುಮಾರಿಗೆ ಹಿರಿಯಡ್ಕ ಪೇಟೆಗೆ ಹೋಗಿ ಮನೆಗೆ ಬರಲು ರಸ್ತೆ ದಾಟುತ್ತಿದ್ದ ಇವರಿಗೆ, ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಫೆ.2ರಂದು ಬೆಳಿಗ್ಗೆ 11:15ರ ಸುಮಾರಿಗೆ ಮೃತಪಟ್ಟರು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.