ಕೈಗಾರಿಕೆಯ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2020-02-03 16:31 GMT

ಕಾಪು, ಫೆ.3: ಕೊಂಬಾಟ್ ಇಂಡಸ್ಟ್ರಿಸ್ ಲಿಮಿಟೆಡ್ ಕಂಪೆನಿಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಂಪೆನಿಯ ಸೂಪರ್‌ ವೈಸರ್ ಇತರರೊಂದಿಗೆ ಸೇರಿಕೊಂಡು ಕಳವು ಮಾಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯ ಸೂಪರವೈಸರ್, ಕೊಡವೂರು ನಿವಾಸಿ ಸುರೇಶ್ ಪೂಜಾರಿ ಎಂಬವರು ತೊಟ್ಟಂ ನಿವಾಸಿ ಸುನಿಲ್ ಡಿಸೋಜ ಎಂಬವರೊಂದಿಗೆ ಸೇರಿ ಫೆ.1ರಂದು ರಾತ್ರಿ ವೇಳೆ ಕಂಪೆನಿಯ ಅನುಮತಿ ಇಲ್ಲದೆ ಕೆಲಸಗಾರರನ್ನು ಹೆದರಿಸಿ ಇಂಡಸ್ಟ್ರಿಸ್‌ಯಲ್ಲಿದ್ದ ವಿವಿಧ ಬಗೆಯ 364 ಫಿಶ್‌ಕ್ಯಾನ್ ಟೀನ್ ಬಾಕ್ಸ್ ಗ ಳು ಸೇರಿದಂತೆ ಒಟ್ಟು 19,92,480ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಕಂಪೆನಿಯ ನಿರ್ದೇಶಕ ವಿಕಾಸ್ ಭಟ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News